5ನೇ ಬಾರಿಗೆ U19 ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಯಂಗ್ ಟೀಮ್ ಇಂಡಿಯಾ !

Prasthutha|

ಆಂಟಿಗುವಾ: ಅಂಡರ್​​​​-19 ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​​​ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಯಂಗ್ ಟೀಮ್​ ಇಂಡಿಯಾ 5ನೇ ಬಾರಿಗೆ ಕಿರಿಯರ ವಿಶ್ವಕಪ್​​ ಚಾಂಪಿಯನ್ ಪಟ್ಟಕ್ಕೇರಿದೆ.

- Advertisement -

ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿತ್ತು. ಜೇಮ್ಸ್ ರಿವ್ [95] ಹಾಗೂ ಜೇಮ್ಸ್ ಸೇಲ್ಸ್ [34] ರನ್ ಗಳಿಸಿದರಾದರೂ ಉಳಿದ ಬ್ಯಾಟರ್’ಗಳಿಂದ ಯಾವುದೇ ಹೋರಾಟ ಪ್ರದರ್ಶಿಸಲಿಲ್ಲ. ಅಂತಿಮವಾಗಿ ಇಂಗ್ಲೆಂಡ್, 44.5 ಓವರ್​​​​ಗಳಲ್ಲಿ 189 ರನ್​​ಗಳಿಗೆ ಆಲೌಟ್ ಆಯಿತು.
​​​190 ರನ್​ಗಳ ಸುಲಭ ಗುರಿ ಪಡೆದ ಭಾರತದ ಯುವ ಪಡೆ 47.4 ಓವರ್​​ಗಳಲ್ಲಿ 6 ವಿಕೆಟ್​​​ ನಷ್ಟಕ್ಕೆ 195 ರನ್​​ ಗಳಿಸಿ, ಇನ್ನೂ 14 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು.


ಬೃಹತ್ ಮೊತ್ತ ಕಲೆಹಾಕುವ ಇಂಗ್ಲೆಂಡ್​​ ಲೆಕ್ಕಾಚಾರಗಳನ್ನು ಟೀಂ ಇಂಡಿಯಾದ ರಾಜ್​ ಬಾವ ಮತ್ತು ರವಿ ಕುಮಾರ್​​​ ತಲೆಕೆಳಗಾಗಿಸಿದರು. 9 ಓವರ್ ಎಸೆದ ರವಿಕುಮಾರ್ 34 ರನ್ ನೀಡಿ 4 ವಿಕೆಟ್ ಪಡೆದರೆ, ರಾಜ್ ಬಾವಾ 9.5 ಓವರ್‌ಗಳಲ್ಲಿ 31 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಬ್ಯಾಟಿಂಗ್’ನಲ್ಲೂ 35 ರನ್ ‘ಗಳಿಸಿದ ರಾಜ್ ಬಾವಾ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

- Advertisement -

5ನೇ ಬಾರಿಗೆ ಕಿರಿಯರ ವಿಶ್ವಕಪ್ ಗೆದ್ದ ಭಾರತ !

ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ 5 ಬಾರಿ ಟ್ರೋಫಿ ಗೆದ್ದು ಅತ್ಯಂತ ಯಶಸ್ವಿ ತಂಡವೆನಿಸಿದೆ. ಆಸ್ಟ್ರೇಲಿಯಾ ಮೂರು ಬಾರಿ ಗೆದ್ದು ಎರಡನೇ ಯಶಸ್ವಿ ತಂಡವಾಗಿದ್ದು, ಪಾಕಿಸ್ತಾನ ಎರಡು ಬಾರಿ ಗೆದ್ದಿದೆ. ಉಳಿದಂತೆ ಬಾಂಗ್ಲಾದೇಶ, ಸೌತ್‌ ಆಫ್ರಿಕಾ, ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ತಲಾ ಒಂದು ಬಾರಿ ಗೆದ್ದಿವೆ.

ಧೋನಿ ಶೈಲಿಯಲ್ಲಿ ಫಿನಿಶ್ !
2011ನೇ ಏಕದಿನ ವಿಶ್ವಕಪ್ ಪಂದ್ಯದ ಫೈನಲ್ ಪಂದ್ಯದಲ್ಲಿ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ್ದ ಮಹೇಂದ್ರ ಸಿಂಗ್ ಧೋನಿ ಶೈಲಿಯಲ್ಲಿಯೇ U19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಯಂಗ್ ಟೀಮ್ ಇಂಡಿಯಾ ಕೀಪರ್ ದಿನೇಶ್ ಬನ‌ ಸಿಕ್ಸರ್ ಬಾರಿಸುವ ಮೂಲಕ ಗೆಲುವಿನ ರನ್ ಗಳಿಸಿದ ಕ್ಷಣ ಅವಿಸ್ಮರಣೀಯವಾಯಿತು.



Join Whatsapp