ಕುಖ್ಯಾತ ರೌಡಿಯ ಹಂತಕ ಜೈಲಿನಲ್ಲಿ ಅನುಮಾನಾಸ್ಪದ ಸಾವು!

Prasthutha|

- Advertisement -

ಬೆಳಗಾವಿ: ಕೇರಳದ ಕುಖ್ಯಾತ ರೌಡಿ ತಸ್ಲಿಮ್ ಕೊಲೆ ಪ್ರಕರಣದ ಆರೋಪಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಗುರುರಾಜ್ ದೊಡ್ಡಮನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕೈದಿ.

ಕಳೆದ ನಾಲ್ಕು ದಿನಗಳಿಂದ ಎದೆ ನೋವಿನಿಂದ ಬಳಲುತ್ತಿರುವುದಾಗಿ ಸಂಬಂಧಿಗೆ ಹೇಳಿಕೊಂಡಿದ್ದ ಆರೋಪಿ ಗುರುರಾಜ್ ನಿನ್ನೆ ರಾತ್ರಿ ಮೃತನಾಗಿದ್ದಾನೆ. ಹದಿನೈದು ದಿನಗಳ ಹಿಂದೆ ಆರೋಪಿ ಗುರುರಾಜ್ ಮೇಲೆ ಜೈಲು ಸಿಬ್ಬಂದಿ ಹಲ್ಲೆ ನಡೆಸಿದ್ದ. ಇದಾದ ಬಳಿಕ ಆತನಿಗೆ ಎದೆ ನೋವು ಆರಂಭವಾಗಿದೆ ಎನ್ನಲಾಗಿದೆ.

- Advertisement -

ಗುರುರಾಜ್ ಸಾವಿಗೆ ಹಿಂಡಲಗಾ ಜೈಲು ಸಿಬ್ಬಂದಿಯೇ ಕಾರಣ ಎಂದು ಮೃತನ ಸಹೋದರ ಕಿರಣ್ ಆರೋಪಿಸಿದ್ದಾನೆ.



Join Whatsapp