“ಮಾ ಸರಸ್ವತಿಗೆ ಭೇದವಿಲ್ಲ”: ಕರ್ನಾಟಕ ಹಿಜಾಬ್ ವಿಚಾರವಾಗಿ ರಾಹುಲ್ ಗಾಂಧಿ ಟ್ವೀಟ್

Prasthutha|

ನವದೆಹಲಿ: ಕಾಲೇಜು ತರಗತಿಯಲ್ಲಿ ಹಿಜಾಬ್ ಧರಿಸಲು ಮುಸ್ಲಿಂ ವಿದ್ಯಾರ್ಥಿಗಳ ಬೇಡಿಕೆಯ ವಿವಾದದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

- Advertisement -

ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ಅನುಮತಿಸದ ಕಾಲೇಜು ಅಧಿಕಾರಿಗಳ ನಿರ್ಧಾರವನ್ನು ಉಲ್ಲೇಖಿಸಿದ ಗಾಂಧಿ, “ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.

“ವಿದ್ಯಾರ್ಥಿಗಳ ಹಿಜಾಬ್ ಅವರ ಶಿಕ್ಷಣದ ಹಾದಿಯಲ್ಲಿ ಬರಲು ಬಿಡುವ ಮೂಲಕ, ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ. ಮಾ ಸರಸ್ವತಿ ಎಲ್ಲರಿಗೂ ಜ್ಞಾನವನ್ನು ನೀಡುತ್ತಾಳೆ ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

- Advertisement -

ಸುಮಾರು 40 ಮಹಿಳಾ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕದ ಉಡುಪಿಯ ಕರಾವಳಿ ಪಟ್ಟಣವಾದ ಕುಂದಾಪುರದ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಶಾಲಾ ಸಿಬ್ಬಂದಿ, ತಮ್ಮ ಸ್ಕಾರ್ಫ್ ತೆಗೆಯದ ಹೊರತು ವಿದ್ಯಾರ್ಥಿಗಳನ್ನು  ಒಳಗೆ ಬಿಡಲು ನಿರಾಕರಿಸಿದ್ದರು. ಶುಕ್ರವಾರ ಎರಡನೇ ದಿನಕ್ಕೂ ಅವರು ತಮ್ಮ ತರಗತಿಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿತ್ತು.

ವಾರದ ಹಿಂದೆ ಸ್ಕಾರ್ಫ್ ಧರಿಸಿದ ಕಾರಣಕ್ಕಾಗಿ ಆರು ವಿದ್ಯಾರ್ಥಿಗಳನ್ನು  ತರಗತಿ ಪ್ರವೇಶಕ್ಕೆ ಅನುಮತಿ ನೀಡಿಲ್ಲ ಎಂದು ಆರೋಪಿಸಿ ಹಿಜಾಬ್ ಪ್ರತಿಭಟನೆಗಳು ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪ್ರಾರಂಭವಾಗಿದ್ದವು.



Join Whatsapp