ನವದೆಹಲಿ: ಫೆಬ್ರವರಿ 14ರಂದು ಮತದಾನ ನಡೆಯಲಿರುವ ಉತ್ತರಾಖಂಡ ವಿಧಾನ ಸಭೆಯ 70 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ರಾಜಕೀಯ ಸಂಬಂಧಿಕರಿಗೆ 20 ಶೇಕಡಾದಷ್ಟು ಸ್ಥಾನಗಳನ್ನು ನೀಡಿವೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು 14 ಮಂದಿ ಆಯಾ ಪಕ್ಷದ ಹಿರಿಯ ರಾಜಕಾರಣಿಗಳ ಸಂಬಂಧಿಕರಿಗೆ ಟಿಕೆಟ್ ನೀಡಿವೆ.
ಬಿಜೆಪಿ 8 ಜನರಿಗೆ ಟಿಕೆಟ್ ನೀಡಿದ್ದು ಅವರಲ್ಲಿ ನಾಲ್ವರು ಮೊದಲ ಬಾರಿಗೆ ಹಿರಿಯರ ನಾಮಬಲದಿಂದ ಚುನಾವಣಕ್ಕೆ ಕಾಲಿಟ್ಟಿದ್ದಾರೆ. ಕಾಂಗ್ರೆಸ್ 6 ಜನರಿಗೆ ಟಿಕೆಟ್ ನೀಡಿದ್ದು ಅದರಲ್ಲಿ 4 ಜನ ಚುನಾವಣಾ ರಾಜಕೀಯಕ್ಕೆ ಹೊಸಬರು.