ತಮಗೆ ಇಷ್ಟ ಬಂದಂತಿರಲು ಅದೇನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲ: ಸಿದ್ದರಾಮಯ್ಯಗೆ ರಘುಪತಿ ಭಟ್ ತಿರುಗೇಟು

Prasthutha|

ಉಡುಪಿ: ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡಬೇಕು. ಶೈಕ್ಷಣಿಕ ವಾತಾವರಣದಲ್ಲಿ ತಮಗೆ ಇಷ್ಟ ಬಂದಂತಿರಲು ಅದೇನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲ, ಮಾಡಿದ್ದನ್ನೆಲ್ಲ ಒಪ್ಪಲು ನಾವು ರಾಹುಲ್ ಗಾಂಧಿಯೂ ಅಲ್ಲ. ನಿಯಮಕ್ಕೆ ಬದ್ಧರಾಗುವುದಾದರೆ ಬರಲಿ, ಇಲ್ಲದಿದ್ದರೆ ಮನೆಯಲ್ಲಿರಲಿ. ನಮ್ಮದು ಇದೇ ಸ್ಪಷ್ಟ ನಿಲುವು ಎಂದು ಬಿಜೆಪಿ ಶಾಸಕ ರಘುಪತಿ ಭಟ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

- Advertisement -

ರಘುಪತಿ ಭಟ್ ಯಾರು ಎಂದು ಪ್ರಶ್ನಿಸುವ ಸಿದ್ದರಾಮಯ್ಯ ಅವರೇ, ನಾನು ಜನರಿಂದ ಆಯ್ಕೆಯಾದವನು, ನಿಮ್ಮ ಹಾಗೆ ಸ್ವಕ್ಷೇತ್ರದಲ್ಲಿ ಜನರಿಂದ ತಿರಸ್ಕೃತಗೊಂಡು, ಬೇರೆಯವರ ಕ್ಷೇತ್ರದ ಮೇಲೆ ಅವಲಂಬಿತನಾದವನಲ್ಲ. ನನ್ನ ಕ್ಷೇತ್ರದ ಸಮಸ್ಯೆಗೆ ಧ್ವನಿಯಾಗುವುದು ನನಗೆ ಸಂವಿಧಾನ ಕಲ್ಪಿಸಿದ ಹಕ್ಕು. ಅದನ್ನು ನಿಮ್ಮಿಂದ ಕಲಿಯಬೇಕಿಲ್ಲ ಎಂದು ಹರಿಹಾಯ್ದಿದ್ದಾರೆ.

ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್ ಯಾರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಪ್ರಶ್ನಿಸಿದ್ದರು.



Join Whatsapp