ಕುಂದಾಪುರ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ: ಶಾಸಕ ಯು.ಟಿ.ಖಾದರ್ ಖಂಡನೆ

Prasthutha|

ಮಂಗಳೂರು: ಕುಂದಾಪುರ ಕಾಲೇಜಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಹಿಜಾಬ್ ಧರಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳನ್ನು ದಿಢೀರನೇ ಗೇಟಿನಲ್ಲಿ ತಡೆದ ಬಗ್ಗೆ  ಮಾಜಿ ಸಚಿವ ಯು.ಟಿ.ಖಾದರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಮಾತನಾಡಿದ ಅವರು,  ಬಾಹ್ಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಕಳೆದ ಹಲವಾರು ವರ್ಷಗಳ ಹಿಂದಿನ ಪದ್ಧತಿಯನ್ನು ಮುರಿದು ವಿದ್ಯಾರ್ಥಿನಿಯರಿಗೆ ಪ್ರವೇಶ ನಿರ್ಬಂಧಿಸಿರುವುದು ಸರಿಯಲ್ಲ. ಇಂಥಹ ಸೂಕ್ಷ್ಮ ವಿಚಾರಗಳಿಗೆ ಸರಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಇರುವುದು ಹಾಗೂ ಮೌನ ವಹಿಸಿರುವುದು ಶಾಲಾ ವಠಾರದಲ್ಲಿ ಇಂಥಹ ಕೋಮು ಭಾವನೆ ಬೆಳೆಯಬೇಕೆಂಬ ಅಪೇಕ್ಷೆಯಂತಿದೆ. ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣದ ದೃಷ್ಟಿಯಿಂದ ಇಂಥಹ ಘಟನೆಗಳಿಗೆ ಆಸ್ಪದ ಕೊಡದೆ, ಹಿಂದೆ ಇರುವ ಪದ್ದತಿಯನ್ನೇ ಮುಂದುವರಿಸಿಕೊಂಡು ಹೋಗಿ ಎಂದು ಹೇಳಿದ್ದಾರೆ.

ಅಲ್ಲದೆ, ವಿದ್ಯಾರ್ಥಿಗಳಿಗೆ ಕಾಲೇಜಿಗೆ ಪ್ರವೇಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಶಾಸಕ ಯು.ಟಿ.ಖಾದರ್ ಮಾನವಿ ಮಾಡಿದ್ದಾರೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

- Advertisement -

ಈ ಬಗ್ಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಿಗಳ ಬಳಿಯೂ ಚರ್ಚೆ ನಡೆಸಿದ ಯು.ಟಿ.ಖಾದರ್ ಶಿಕ್ಷಣ ಸಚಿವರಲ್ಲೂ ಮಾತುಕತೆ ನಡೆಸುತ್ತೇನೆಂದು ತಿಳಿಸಿದರು.



Join Whatsapp