ಮಂಗಳೂರು: ಕಳೆದುಹೋದ ವಜ್ರದ ಬಳೆಯನ್ನು ಮಹಿಳೆಗೆ ಮರಳಿ ನೀಡಿದ ಅಶ್ರಫ್

Prasthutha|

ಮಂಗಳೂರು: ಕಳೆದುಹೋಗಿದ್ದ ವಜ್ರದ ಬಳೆಯನ್ನು ಟ್ರಾಲಿ ರಿಟ್ರೀವರ್‌ ಸಿಬ್ಬಂದಿ ಅಶ್ರಫ್‌ ಮೊಯ್ದಿನ್‌ ಅವರು ಮರಳಿ ವಾರಸುದಾರರಿಗೆ ದೊರಕಿಸಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.

- Advertisement -

ಬೆಂಗಳೂರಿನಿಂದ ಬಂದಿದ್ದ ಸಂಬಂಧಿಯನ್ನು ಕರೆದೊಯ್ಯಲು ಬಂದಿದ್ದ ಮಹಿಳೆ ಬಳೆಯನ್ನು ಕಳೆದುಕೊಂಡಿದ್ದರು. ವಿಮಾನ ನಿಲ್ದಾಣದಿಂದ ತೆರಳಿದ ಬಳಿಕ ಬಳೆ ಕಳೆದು ಹೋಗಿರುವುದು ಅವರ ಅರಿವಿಗೆ ಬಂದಿದ್ದು, ಬೆಂಗಳೂರಿನಿಂದ ಆಗಮಿಸಿದ್ದ ಪ್ರಯಾಣಿಕರ ಬಳಿ ವಿಷಯ ತಿಳಿಸಿದ್ದರು. ಅವರು ತಕ್ಷಣ ನಿಲ್ದಾಣದ ಟರ್ಮಿನಲ್‌ ಮ್ಯಾನೇಜರ್‌ ಗೆ ಮಾಹಿತಿ ನೀಡಿ ಪತ್ತೆಹಚ್ಚುವಂತೆ ಕೋರಿದ್ದರು.

ವಿಮಾನ ನಿಲ್ದಾಣದಲ್ಲಿ ಟ್ರಾಲಿ ರಿಟ್ರೀವರ್‌ ಸಿಬ್ಬಂದಿ ಅಶ್ರಫ್‌  ಅವರಿಗೆ ಟರ್ಮಿನಲ್‌ ಕೆಳ ಮಹಡಿಯ ನಿರ್ಗಮನ ಭಾಗದಲ್ಲಿ ಈ ಬಳೆ ದೊರಕಿದ್ದು, ಅದನ್ನು ಭದ್ರತಾ ತಂಡಕ್ಕೆ ಹಸ್ತಾಂತರಿಸಿದ್ದರು. ಟರ್ಮಿನಲ್‌ ಮ್ಯಾನೇಜರ್‌ ಗೆ ಅದಾಗಲೇ ಅಶ್ರಫ್‌ ಹಸ್ತಾಂತರಿಸಿದ್ದ ಬಳೆಯೇ ಅದು ಎಂಬುದು ಖಚಿತಗೊಂಡಿತ್ತು. ಬಳಿಕ  ಆ ಬಳೆಯನ್ನು ಮಹಿಳೆಗೆ ಹಸ್ತಾಂತರಿಸಲಾಗಿದ್ದು, ಅಶ್ರಫ್‌ ಅವರು ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Join Whatsapp