ಕೇರಳದೊಂದಿಗಿನ ಸಂಬಂಧದ ಬಗ್ಗೆ ಮಲಯಾಳಂನಲ್ಲಿ ಟ್ವೀಟ್ ಮಾಡಿದ ದುಬೈ ದೊರೆ!

Prasthutha|

►ಅರೆಬಿಕ್ ಭಾಷೆಯಲ್ಲಿ ಪಿಣರಾಯಿ ವಿಜಯನ್ ಧನ್ಯವಾದ!

- Advertisement -

ದುಬೈ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಮಲಯಾಳಂನಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶೇಖ್ ಮುಹಮ್ಮದ್ , ಕೇರಳದೊಂದಿಗೆ ಯುಎಇ ವಿಶೇಷ ಸಂಬಂಧವನ್ನು ಹೊಂದಿದ್ದು, ದುಬೈ ಮತ್ತು ಯುಎಇಯ ಆರ್ಥಿಕ ಮತ್ತು ಅಭಿವೃದ್ಧಿಯಲ್ಲಿ ಕೇರಳೀಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

- Advertisement -

ಅವರು ಮಲಯಾಳಂನಲ್ಲಿ ಟ್ವೀಟ್ ಮಾಡುತ್ತಿರುವುದು ಇದೇ ಮೊದಲು. ಶೇಖ್ ಮುಹಮ್ಮದ್ ಅವರ ಟ್ವೀಟ್ ಗೆ ಅನಿವಾಸಿ ಕೇರಳಿಗರು ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಿಸಿದ್ದಾರೆ.

ಆದರೆ ಇದಕ್ಕೆ ಪ್ರತಿಯಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅರೆಬಿಕ್ ಭಾಷೆಯಲ್ಲಿ ರೀಟ್ವೀಟ್ ಮಾಡಿದ್ದಾರೆ.

‘ನಿಮಗೆಲ್ಲರಿಗೂ ಉತ್ತಮ ಆರೋಗ್ಯಕ್ಕಾಗಿ ಹಾರೈಸುತ್ತೇನೆ. UAE ಮತ್ತು ದುಬೈನ ಅಭಿವೃದ್ಧಿಗೆ ಕೇರಳದ ಜನರು ನೀಡಿದ ಕೊಡುಗೆಗಳಿಗೆ ಅಭಿನಂದಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಆತಿಥ್ಯದ ಸಂತೋಷವನ್ನು ನಾವು ಸಹ ಹಂಚಿಕೊಳ್ಳುತ್ತೇವೆ. ನಾವು ಈ ಸಂಬಂಧವನ್ನು ಇನ್ನಷ್ಟು ಬಲಪಡಿಸಿ ಒಟ್ಟಿಗೆ ಕೆಲಸ ಮಾಡಲು ಬಯಸುತ್ತೇವೆ. ಸ್ವಾಗತ’ ಎಂದು ಪಿಣರಾಯಿ ಅರೆಬಿಕ್ ಭಾಷೆಯಲ್ಲಿ ಉತ್ತರಿಸಿದ್ದಾರೆ.

Join Whatsapp