ಓಮಿಕ್ರಾನ್ ಗಿಂತ ‘ಓ ಮಿತ್ರೋ’ ತುಂಬಾ ಅಪಾಯಕಾರಿ: ಶಶಿ ತರೂರ್

Prasthutha|

ನವದೆಹಲಿ: ಓಮಿಕ್ರಾನ್ ಗಿಂತ “ಓ ಮಿತ್ರೋ” ತುಂಬಾ ಅಪಾಯಕಾರಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಗೇಲಿ ಮಾಡಿದ್ದಾರೆ.

- Advertisement -

ಈ ಬಗ್ಗೆ  ಟ್ವೀಟ್  ಮಾಡಿರುವ ಅವರು, “ಓ ಮಿತ್ರೋ ಎನ್ನುವುದು ಒಮಿಕ್ರಾನ್ ಗಿಂತ ಭಾರೀ ಅಪಾಯಕಾರಿ. ಹೆಚ್ಚಿದ ಧ್ರುವೀಕರಣ, ದ್ವೇಷ ಮತ್ತು ಧರ್ಮಾಂಧತೆಯ ಪ್ರಚಾರ, ಸಂವಿಧಾನದ ಮೇಲಿನ ಕಪಟ ದಾಳಿಗಳು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದರಲ್ಲಿ ನಾವು ಪ್ರತಿದಿನದ ಪರಿಣಾಮಗಳನ್ನು ಕಾಣುತ್ತಿದ್ದೇವೆ. ಈ ವೈರಸ್‌ ನ ಯಾವುದೇ ‘ಸೌಮ್ಯ ರೂಪಾಂತರ’ ಇಲ್ಲ” ಎಂದು ಶಶಿ ತರೂರ್ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.



Join Whatsapp