ಮೀಡಿಯಾ ಒನ್ ಚಾನೆಲ್ ಪ್ರಸಾರ ನಿರ್ಬಂಧಿಸಿದ ಕೇಂದ್ರ ಸರ್ಕಾರ

Prasthutha|

ತಿರುವನಂತಪುರಂ:  ಮಲಯಾಳಂ ನ್ಯೂಸ್ ಚಾನೆಲ್ ‘ಮೀಡಿಯಾ ಒನ್’ ಪ್ರಸಾರವನ್ನು ಮತ್ತೆ ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಸುರಕ್ಷತೆಯ ಕಾರಣ ಮುಂದಿಟ್ಟು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಈ ನಿರ್ಬಂಧ ಹೇರಿದೆ ಎಂದು ಚಾನೆಲ್ ಮುಖ್ಯಸ್ಥರು ಆರೋಪಿಸಿದ್ದಾರೆ.

- Advertisement -

ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಚಾನೆಲ್ ಹೇಳಿದೆ.

  ಈ ಹಿಂದೆ ಪ್ರಸಾರಕ್ಕೆ ತಡೆ ನೀಡಲಾಗಿದ್ದರೂ ಬಳಿಕ ಅದನ್ನು ತೆರವುಗೊಳಿಸಲಾಗಿತ್ತು. ಇದೀಗ ಮತ್ತೊಮ್ಮೆ ಕೇಂದ್ರ ಸರಕಾರ ಪ್ರಸಾರಕ್ಕೆ ತಡೆ ನೀಡಿದ್ದು ವೀಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಸುರಕ್ಷತೆಯ ಕಾರಣವನ್ನು ಉಲ್ಲೇಖಿಸಿ ಕೇಂದ್ರ ವಾರ್ತಾ ಇಲಾಖೆಯು ಪ್ರಸಾರಕ್ಕೆ ತಡೆ ನೀಡಿದ್ದು, ಯಾವುದೇ ಸಮರ್ಪಕ ಕಾರಣಗಳನ್ನು ನಮ್ಮ ಮುಂದಿಟ್ಟಿಲ್ಲ ಎಂದು ಮೀಡಿಯಾ ಒನ್ ಸಂಪಾದಕ ಪ್ರಮೋದ್ ರಾಮನ್‌ ತಿಳಿಸಿದ್ದಾರೆ.

Join Whatsapp