ಗುರ್ಗಾಂವ್ ನಲ್ಲಿ ನಮಾಝ್ ಗೆ ಅಡ್ಡಿ । ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಮ್ ಕೋರ್ಟ್ ಸಮ್ಮತಿ

Prasthutha|

ನವದೆಹಲಿ: ಹರ್ಯಾಣದ ಗುರ್ಗಾಂವ್ ನಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಶುಕ್ರವಾರದ ನಮಾಝ್ ಗೆ ಸಂಘಪರಿವಾರದ ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ತಡೆಯುವಲ್ಲಿ ಅಸಡ್ಡೆ ತೋರಿರುವ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ತುರ್ತು ವಿಚಾರಣೆಯ ತುರ್ತು ಪಟ್ಟಿಗೆ ಸೇರಿಸಲು ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಸೋಮವಾರ ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ರಾಜ್ಯಸಭಾ ಮಾಜಿ ಸಂಸದ ಮುಹಮ್ಮದ್ ಅದೀಬ್ ಅವರು ಹರ್ಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಸುಪ್ರೀಮ್ ಕೋರ್ಟ್ ನಲ್ಲಿ ವಾದಿಸಿದ್ದರು.

- Advertisement -

ಸಂಘಪರಿವಾರ ಕಾರ್ಯಕರ್ತರು ಶುಕ್ರವಾರದ ನಮಾಝ್ ಗೆ ನಿರಂತರ ಅಡ್ಡಿಪಡಿಸಿದ್ದರ ನಡುವೆ ಹರ್ಯಾಣ ಸರ್ಕಾರ ಗುರ್ಗಾಂವ್ ನಲ್ಲಿ ನಮಾಝ್ ಗೆ ನೀಡಲಾಗಿದ್ದ ಅನುಮತಿಯನ್ನು ರದ್ದುಪಡಿಸಿತ್ತು.

ನಮಾಝ್ ಗೆ ಅಡ್ಡಿಪಡಿಸುತ್ತಿದ್ದ ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸ್ ಆಯುಕ್ತರಿಗೆ ಹಲವು ಸಲ ದೂರು ನೀಡಲಾಗಿತ್ತು ಎಂದು ಅರ್ಜಿದಾರರು ಮಾಧ್ಯಮಕ್ಕೆ ತಿಳಿಸಿದ್ದಾರೆ.



Join Whatsapp