ಸೋಂಕಿತ ಪ್ರತಿ ಮೂರರಲ್ಲಿ ಒಂದು ಸಾವು : ‘ನಿಯೋಕೋವ್’ ಎಂಬ ಹೊಸ ವೈರಸ್ ಪತ್ತೆ | ವುಹಾನ್ ವಿಜ್ಞಾನಿಗಳ ಎಚ್ಚರಿಕೆ !

Prasthutha|

ವುಹಾನ್ : 2019 ರಲ್ಲಿ ಕೋವಿಡ್-19 ವೈರಸ್ ಮೊದಲ ಬಾರಿಗೆ ಪತ್ತೆಯಾದ ಚೀನಾದ ವುಹಾನ್ ನ ವಿಜ್ಞಾನಿಗಳು, ದಕ್ಷಿಣ ಆಫ್ರಿಕಾದಲ್ಲಿ ಹೊಸ ರೀತಿಯ ಕೊರೊನಾ ವೈರಸ್ ‘ನಿಯೋಕೋವ್’ ಕಂಡುಬಂದಿರುವ ಕುರಿತು ಎಚ್ಚರಿಕೆ ನೀಡಿದ್ದಾರೆ. ಇದು ಹೆಚ್ಚಿನ ಸಾವು ಮತ್ತು ಪ್ರಸರಣ ಪ್ರಮಾಣವನ್ನು ಹೊಂದಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ. ಸೋಂಕಿತ ಮೂವರಲ್ಲಿ ಒಬ್ಬರು ಮರಣವನ್ನಪ್ಪುತ್ತಾರೆಂಬ ಆತಂಕಕಾರಿ ಮಾಹಿತಿಯನ್ನು ಅವರು ಬಹಿರಂಗಪಡಿಸಿದ್ದಾರೆ.

- Advertisement -

ಆದಾಗ್ಯೂ ವರದಿಗಳ ಪ್ರಕಾರ, ‘ನಿಯೋಕೋವ್’ ವೈರಸ್ ಹೊಸದಲ್ಲ. ಮೆರ್ಸ್-ಕೋವ್ ವೈರಸ್ ಗೆ ಸಂಬಂಧಿಸಿದ, ಇದು 2012 ಮತ್ತು 2015 ರಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ಹರಡಿದ್ದಾಗ ಪತ್ತೆ ಹಚ್ಚಲಾಗಿತ್ತು. ಇದು ಮಾನವರಲ್ಲಿ ಕೊರೊನಾ ವೈರಸ್ ಗೆ ಕಾರಣವಾಗುವ ಸಾರ್ಸ್-ಕೋವ್-2 ಗೆ ಹೋಲಿಕೆಯಾಗುತ್ತದೆ ಎನ್ನಲಾಗಿದೆ.

‘ನಿಯೋಕೋವ್’ ದಕ್ಷಿಣ ಆಫ್ರಿಕಾದ ಬಾವಲಿಗಳ ಸಂತಾನದಲ್ಲಿ ಮೊದಲಿಗೆ ಪತ್ತೆಯಾಗಿತ್ತು ಮತ್ತು ಇದು ಪ್ರಾಣಿಗಳ ನಡುವೆ ಮಾತ್ರ ಹರಡುತ್ತದೆ ಎಂದು ತಿಳಿಯಲಾಗಿತ್ತು. ಆದರೆ ಬಯೋ ಆರ್ಕ್ಸಿವ್ ವೆಬ್ ಸೈಟ್ ನಲ್ಲಿ ಪೂರ್ವಮುದ್ರಣವಾಗಿ ಪ್ರಕಟವಾದ ಹೊಸ ಅಧ್ಯಯನವು ‘ನಿಯೋಕೋವ್’ ಮತ್ತು ಅದರ ಹತ್ತಿರದ ಸಾಪೇಕ್ಷ ‘ಪಿಡಿಎಫ್-2180-ಕೋವ್’ ವೈರಸ್ ಮನುಷ್ಯರ ನಡೂವೆಯೂ ಹರಡಬಲ್ಲುದು ಎಂದು ಸಂಶೋಧಿಸಿದ್ದಾರೆ.

- Advertisement -

ವುಹಾನ್ ವಿಶ್ವವಿದ್ಯಾಲಯ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈಯನ್ಸ್ ಇನ್ಸ್ಟಿಟ್ಯೂಟ್ ಆಫ್  ಬಯೋಫಿಸಿಕ್ಸ್ ನ ಸಂಶೋಧಕರ ಪ್ರಕಾರ, ಈ ವೈರಸ್ ಮಾನವ ಜೀವಕೋಶಗಳಿಗೆ ನುಸುಳಲು ಕೇವಲ ಒಂದು  ರೂಪಾಂತರದ ಅಗತ್ಯವಿದೆ. ಕೋವಿಡ್-19 ಗಿಂತ ಹೆಚ್ಚು ಅಪಾಯಕಾರಿಯಾಗಿ ‘ನಿಯೋ ಕೋವ್’ ಹರಡುತ್ತದೆ ಮತ್ತು ಉಸಿರಾಟದ ಕಾಯಿಲೆಗಳನ್ನು ಹೊಂದಿರುವ ಮತ್ತು ಕಡಿಮೆ ರೋಗ ನಿರೋಧಕ ಶಕ್ತಿಗಳನ್ನು ಹೊಂದಿರುವವರು ಈ ಹೊಸ ವೈರಸ್ ನಿಂದ ಪಾರಾಗಲು ಸಾಧ್ಯವಿಲ್ಲ ಎಂದು ಅಧ್ಯಯನ ವರದಿ ತಿಳಿಸಿದೆ. ಇದನ್ನು ಸಂಶೋಧಿಸಿದ ತಜ್ಞರ ಪ್ರಕಾರ ಈ ವೈರಸ್ ನ ಮರಣ ದರ ಪ್ರತಿ ಮೂವರಲ್ಲಿ ಒಬ್ಬ ಸೋಂಕಿತ ಸಾಯುತ್ತಾರೆ ಎನ್ನಲಾಗಿದೆ.  

‘ನಿಯೋಕೋವ್’ ವೈರಸ್ ಬಗ್ಗೆ ಚೀನಾದ ಸಂಶೋಧಕರು ಪಡೆದ ದತ್ತಾಂಶದ ಬಗ್ಗೆ ವೆಕ್ಟರ್ ಸಂಶೋಧನಾ ಕೇಂದ್ರವು ಮಾಹಿತಿ ಪಡೆದಿದೆ. ಮಾನವರಲ್ಲಿ ಸಕ್ರಿಯವಾಗಿ ಹರಡುವ ಸಾಮರ್ಥ್ಯದ ಹೊಸ ವೈರಸ್ ಬಗ್ಗೆ ಈಗಲೇ ಯಾವ ತಾರ್ಕಿಕ ಅಂತ್ಯಕ್ಕೆ ಬರಲಾಗದು ಎಂದು ಅದು ಅಭಿಪ್ರಾಯಪಟ್ಟಿದೆ. ಈ ಕುರಿತು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ಮಾಡುವ ಅಗತ್ಯವಿದೆ ಎಂದು ಹೇಳಿದೆ.



Join Whatsapp