ಕಮಲಾ ಹ್ಯಾರಿಸ್ ಗೆ ತಮಿಳಿನಲ್ಲಿ ಪತ್ರ ಬರೆದ ಡಿಎಂಕೆ ಅಧ್ಯಕ್ಷ ಎಮ್.ಕೆ ಸ್ಟಾಲಿನ್

Prasthutha|

- Advertisement -

ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಡಿ.ಎಂ.ಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ತಮಿಳಿನಲ್ಲಿ ಪತ್ರ ಬರೆದಿದ್ದಾರೆ. ಅವರು ತಮಿಳಿನಲ್ಲಿ ಶುಭ ಹಾರೈಸುವ ಮೂಲಕ ಕಮಲಾ ಹ್ಯಾರಿಸ್ ಅವರಿಗೆ ತಮಿಳು ನಾಡಿನೊಂದಿಗಿರುವ ಸಂಬಂಧವನ್ನು ನೆನಪಿಸುತ್ತಾ ಅವರ ಸಾಧನೆಗೆ ಶುಭ ಹಾರೈಸಿದ್ದಾರೆ. ಕಮಲಾ ಹ್ಯಾರಿಸ್ ರವರ ತಾಯಿ ಶ್ಯಾಮಲ ಗೋಪಾಲನ್ ಹ್ಯಾರಿಸ್ ಅವರ ಮಾತೃಭಾಷೆಯಾದ ತಮಿಳಿನಲ್ಲಿ ಪತ್ರ ಬರೆಯುವುದರಿಂದ ಅವರಿಗೆ ಹೆಚ್ಚು ಸಂತೋಷವನ್ನು ತರಬಹುದೆಂದು ನಾನು ಭಾವಿಸುತ್ತೇನೆ ಎಂದು ಸ್ಟಾಲಿನ್ ಹೇಳಿದ್ದಾರೆ. ಪತ್ರದ ಪ್ರತಿಯನ್ನು ಸ್ಟಾಲಿನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಕಮಲಾ ಹ್ಯಾರಿಸ್ ಅವರ ಗೆಲುವು ಸಾಮಾಜಿಕ ಸಮಾನತೆಯನ್ನು ನಂಬುವ ತಮ್ಮ ದ್ರಾವಿಡ ಚಳುವಳಿಗೆ ಆತ್ಮವಿಶ್ವಾಸವನ್ನು ನೀಡಿದೆ ಮತ್ತು ಅಮೇರಿಕಾವನ್ನು ಯಶಸ್ಸಿನ ಕಡೆ ಕೊಂಡೊಯ್ಯುವುದರ ಜೊತೆಗೆ ತಮಿಳು ಸಂಪ್ರದಾಯವನ್ನೂ ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಕಮಲಾ ಅವರ ಆಗಮನಕ್ಕಾಗಿ ತಮಿಳುನಾಡು ಕಾಯುತ್ತಿದೆ ಎಂದು ಸ್ಟಾಲಿನ್ ಪತ್ರದಲ್ಲಿ ತಿಳಿಸಿದ್ದಾರೆ. ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ತಮಿಳುನಾಡಿನ ತಿರುವಾರೂರು ಜಿಲ್ಲೆಯ ತುಲಸೀಂದ್ರಪುರಂ ಮೂಲದವರು. ಭಾನುವಾರ ಕಮಲಾ ಹ್ಯಾರಿಸ್ ಅವರ ವಿಜಯದ ಸುದ್ದಿಯನ್ನು ಕೇಳಿ ಈ ಪ್ರದೇಶದಲ್ಲಿ ವಿಜಯೋತ್ಸವ ನಡೆದಿತ್ತು.



Join Whatsapp