ಮಧ್ಯಪ್ರದೇಶದ 28 ಕ್ಷೇತ್ರಗಳ ಉಪಚುನಾವಣೆ | ಬಿಜೆಪಿಗೆ 5ರಲ್ಲಿ ಗೆಲುವು, 14ರಲ್ಲಿ ಮುನ್ನಡೆ | ಕಾಂಗ್ರೆಸ್ 7, ಬಿಎಸ್ಪಿ 1 ಮುನ್ನಡೆ

Prasthutha|

ಭೋಪಾಲ್ : ಮಧ್ಯಪ್ರದೇಶದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ. 28 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ, ಸದ್ಯಕ್ಕೆ ಸಿಕ್ಕಿರುವ ಮಾಹಿತಿಗಳ ಪ್ರಕಾರ, 5 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ ಮತ್ತು 14 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ 19 ಸ್ಥಾನಗಳನ್ನು ತನ್ನ ಪರವಾಗಿ ಭದ್ರ ಮಾಡುವ ನಿಟ್ಟಿನಲ್ಲಿ ಬಿಜೆಪಿ ಮುನ್ನಡೆ ಕಾದುಕೊಂಡು ಬಂದಿದೆ.

ಇನ್ನುಳಿದಂತೆ ಏಳು ಸ್ಥಾನಗಳಲ್ಲಿ ಮತ್ತು ಒಂದು ಸ್ಥಾನದಲ್ಲಿ ಬಿಎಸ್ಪಿ ಮುನ್ನಡೆ ಸಾಧಿಸಿದೆ.

- Advertisement -

ಬಿಜೆಪಿಯಲ್ಲಿ ವಿಜೇತರಾದ ಮತ್ತು ಮುನ್ನಡೆ ಸಾಧಿಸಿರುವ ಬಿಜೆಪಿ ಅಭ್ಯರ್ಥಿಗಳಿಗೆ ಜ್ಯೋತಿರಾದಿತ್ಯ ಸಿಂದ್ಯಾ ಅಭಿನಂದಿಸಿದ್ದಾರೆ. ಕಳೆದ ಮಾರ್ಚ್ ನಲ್ಲಿ ಜ್ಯೋತಿರಾದಿತ್ಯ ಸಿಂದ್ಯಾ ನೇತೃತ್ವದಲ್ಲಿ 25 ಶಾಸಕರು ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡಿದ್ದ ಹಿನ್ನೆಲೆಯಲ್ಲಿ ಉಪಚುನಾವಣೆಗೆ ಕಾರಣವಾಗಿತ್ತು. ಇನ್ನುಳಿದ ಮೂರು ಸ್ಥಾನಗಳಲ್ಲಿನ ಶಾಸಕರ ಮರಣದಿಂದ ತೆರವುಗೊಂಡಿತ್ತು.

ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಕಮಲನಾಥ್ ನೇತೃತ್ವದ ಸರಕಾರದಲ್ಲಿ ಭಿನ್ನಮತ ಮೂಡಿ ಜ್ಯೋತಿರಾದಿತ್ಯ ಸಿಂದ್ಯಾ ಬಣ ಬಿಜೆಪಿ ವಲಯಕ್ಕೆ ಸೇರಿಕೊಂಡಿತ್ತು.

ಬಿಜೆಪಿಗರ ಮುನ್ನಡೆಯಿಂದ ಪ್ರಸ್ತುತ ಅಧಿಕಾರದಲ್ಲಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸರಕಾರ ಈಗ ಬಹುಮತದಿಂದ ಸುಭದ್ರವಾಗಿದೆ.

- Advertisement -