ದೆಹಲಿ ಪೆರೇಡ್ ಗೆ ನಾರಾಯಣ ಗುರು ಸ್ತಬ್ಧಚಿತ್ರ ನಿರಾಕರಣೆ; ಸ್ವಾಭಿಮಾನ ನಡಿಗೆ ಮೂಲಕ ಗಣರಾಜ್ಯೋತ್ಸವ ಆಚರಣೆ

Prasthutha|

ನವದೆಹಲಿಯಲ್ಲಿ ಇಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕೇರಳ ಸರ್ಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರದ ನಿರಾಕರಣೆ ವಿರೋಧಿಸಿ ರಾಜ್ಯದ್ಯಂತ ಬ್ರಹ್ಮ ನಾರಾಯಣಗುರು ವಿಚಾರ ವೇದಿಕೆ ಕರೆ ನೀಡಿದ್ದ ” ಸ್ವಾಭಿಮಾನ ನಡಿಗೆ” ಮೌನ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವೇದಿಕೆಯ ಕಾರ್ಯಕರ್ತರು ಹಾಗೂ ದಾಸರಹಳಿ ಈಡಿಗ ಸಮುದಾಯ ಸಂಘಟನೆಯಿಂದ ಮೌನ ಸ್ವಾಭಿಮಾನ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ವಾಬಿಮಾನ ನಡಿಗೆ ಸಭೆಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಈಡಿಗ ಸಮಾಜದ ಹಿರಿಯ ಮುಖಂಡರಾದ ಮುಕುಂದ ಇಡಗೋಡು, ಪರುಶರಾಮ ಬಿಳಿಸಿರೆ, ದತ್ತಾತ್ರೇಯ ಬಿದರಗೆರೆ, ವಕೀಲರಾದ ಲೋಕೆಶ್ ಹೊಸನಗರ, ಕೇಶವ ಮೂರ್ತಿ, ವೇದಿಕೆ ಖಚಾಂಚಿ ದಿನೇಶ್ ಮಳಲಗದ್ದೆ, ಸಂಘಟನಾ ಕಾರ್ಯದರ್ಶಿ ಗಣೇಶ್ ಈಡಿಗ ಮತ್ತಿತರರು ಹಾಜರಿದ್ದರು.
ಬಳಿಕ ಮಾತನಾಡಿದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ್ ಮಾತನಾಡಿ, ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸುಧಾರಕರು ಹಾಗೂ ಮೌಢ್ಯವಂತ ಜನರಲ್ಲಿ ವೈಚಾರಿಕತೆಯನ್ನು ಬಿತ್ತಿದ ಮಹಾನ್ ನಾಯಕ. ಶೋಷಣೆಯ ವಿರುದ್ಧ ಹೋರಾಟ ನಡೆಸಿದವರು. ಇವರ ತತ್ವ ಸಿದ್ಧಾಂತ, ಹೋರಾಟ ಕುರಿತು ಮಹಾತ್ಮ ಗಾಂಧಿ ಹಾಗೂ ರಾಷ್ಟ್ರ ಕವಿ ರವೀಂದ್ರನಾಥ ಠಾಗೋರ್ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಕೇರಳ ಸರ್ಕಾರ ಕಳುಹಿಸಿದ ಸ್ತಬ್ಧಚಿತ್ರವನ್ನು ನಿರಾಕರಿಸಿರುವುದು ಒಂದು ಸಮಾಜ, ಸಮುದಾಯ ಮಹಾನ್ ನಾಯಕನಿಗೆ ಮಾಡಿದ ಅವಮಾನ ಕೇಂದ್ರದ ಈ ನಿಲುವು ವಿರೋಧಿಸಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.
ವಕೀಲರಾದ ಲೋಕೇಶ್, ಕೇಶವಮೂರ್ತಿ ಮಾತನಾಡಿ, ಕೇಂದ್ರ ಸರ್ಕಾರದ ಈ ನಿಲುವು ಒಂದು ಸಮಾಜ, ಸಮುದಾಯವನ್ನು ಅವಮಾನಿಸಿದಂತೆ ಇದರ ವಿರುದ್ದ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.



Join Whatsapp