ಉಪ್ಪಿನಂಗಡಿ: ಲಾಡ್ಜ್ ನಲ್ಲಿ ವಿಟ್ಲ ಮೂಲದ ಯುವಕ ನೇಣು ಬಿಗಿದು ಆತ್ಮಹತ್ಯೆ

Prasthutha|

ಉಪ್ಪಿನಂಗಡಿ: ಲಾಡ್ಜ್ ನಲ್ಲಿ ವಿಟ್ಲ ಮೂಲದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ವಿಟ್ಲ ಮಾಡೂರು ನಿವಾಸಿ 37 ವರ್ಷದ ಮಹಮ್ಮದ್ ಶರೀಫ್ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನಾಗಿದ್ದಾನೆ.

- Advertisement -

ಮಂಗಳವಾರ ಬೆಳಿಗ್ಗೆ 11:30 ಕ್ಕೆ ಲಾಡ್ಜ್ ನಲ್ಲಿ ರೂಂ ಪಡೆದಿದ್ದ ಶರೀಫ್ ಇಂದು(ಬುಧವಾರ) ಮಧ್ಯಾಹ್ನ ತನಕ ರೂಮ್ ಖಾಲಿ ಮಾಡದಿರುವುದರಿಂದ ಅನುಮಾನಗೊಂಡ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಕೋಣೆಯ ಬಾಗಿಲು ತೆರೆದು ನೋಡಿದಾಗ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

Join Whatsapp