ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಯ ಬೆಂಗಾವಲು ಪಡೆಗೆ ಕಲ್ಲು ತೂರಾಟ

Prasthutha|

ಮೀರತ್: ಬಿಜೆಪಿ ಅಭ್ಯರ್ಥಿಯ ಚುನಾವಣಾ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಛುರ್ ಗ್ರಾಮದಲ್ಲಿ ನಡೆದಿದೆ.

- Advertisement -


ಸಿವಾಲ್ಕಸ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಂದರ್ ಪಾಲ್ ಸಿಂಗ್ ಅವರ ಪ್ರಚಾರ ವಾಹನದ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಅಭ್ಯರ್ಥಿಯ ಕಾರಿನ ಗಾಜುಗಳು ಚೂರುಚೂರಾಗಿವೆ. ಅಭ್ಯರ್ಥಿಯು ಜಾಟ್ ಸಮುದಾಯದವರು ವಾಸಿಸುತ್ತಿರುವ ಪ್ರದೇಶದಲ್ಲಿ ಪ್ರಚಾರ ಮಾಡುತ್ತಿದ್ದರು. ಅವರ ಮೇಲೆ ಕಲ್ಲು ತೂರಾಟ ನಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ದಾಳಿಯ ಹಿಂದೆ ರಾಷ್ಟ್ರೀಯ ಲೋಕದಳದ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಅನುಕಂಪದ ಮೂಲಕ ಮತಗಳನ್ನು ಕಸಿದುಕೊಳ್ಳುವ ತಂತ್ರವಾಗಿದೆ ಎಂದು ರಾಷ್ಟ್ರೀಯ ಲೋಕದಳ ಪ್ರತಿಕ್ರಿಯೆ ನೀಡಿದೆ.


ಮಣಿಂದರ್ ಪಾಲ್ ಸಿಂಗ್ ಬಿಜೆಪಿ ಸೇರುವ ಮೊದಲು ಎಸ್ ಪಿ ಮತ್ತು ಬಿಎಸ್ ಪಿಯಲ್ಲಿ ಕೆಲಸ ಮಾಡಿದ್ದರು. ಇದೇ ಅಭ್ಯರ್ಥಿಯ ವಿರುದ್ಧ ಕೆಲವು ದಿನಗಳ ಹಿಂದೆ ಇದೇ ಜಿಲ್ಲೆಯಲ್ಲಿ ಇದೇ ರೀತಿಯ ದಾಳಿ ನಡೆದಿತ್ತು. ಕೋಪಗೊಂಡ ಗ್ರಾಮಸ್ಥರು ಬಿಜೆಪಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಅಭ್ಯರ್ಥಿಯನ್ನು ಓಡಿಸಿದ್ದರು.

- Advertisement -


ಬಿಜೆಪಿಯ ಹಾಲಿ ಶಾಸಕ ಜಿತೇಂದ್ರ ಪಾಲ್ ಸಿಂಗ್ ಅವರಿಗೆ ಸ್ಥಾನ ನಿರಾಕರಿಸಿದ ನಂತರ ಮಣಿಂದರ್ ಅವರಿಗೆ ಹಂಚಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಣಿಂದರ್ ಪಾಲ್ ಸಿಂಗ್ ಅವರ ಸ್ಥಾನವನ್ನು ಮರಳಿ ಪಡೆಯಬೇಕೆಂದು ಬಿಜೆಪಿಯಲ್ಲಿಯೂ ವಿರುದ್ಧ ಚಟುವಟಿಕೆಗಳು ನಡೆಯುತ್ತಿವೆ.



Join Whatsapp