ಅಂಬೇಡ್ಕರ್ ಫೋಟೋ ಇದ್ದರೆ ಪುಷ್ಪಾರ್ಚನೆ ಮಾಡುವುದಿಲ್ಲ ಎಂದ ಜಿಲ್ಲಾ ನ್ಯಾಯಾಧೀಶ !

Prasthutha|

ರಾಯಚೂರು: ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇ ಡ್ಕರ ಭಾವಚಿತ್ರವನ್ನು ತೆಗೆಯುವಂತೆ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಹೇಳಿದ್ದರಿಂದ ಧ್ವಜಾರೋಹಣ ಕಾರ್ಯಕ್ರ ಮದಲ್ಲಿ ಪ್ರತಿರೋಧ ವ್ಯಕ್ತವಾದ ಘಟನೆ ಜರುಗಿದೆ.

- Advertisement -


ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಪ್ರತಿವರ್ಷದಂತೆ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಆಯೋಜಿಸಲಾಗಿತ್ತು. ಧ್ವಜಾರೋಹಣ ಮುಂಚಿತವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಹೈಕೋರ್ಟ್ ಮಾರ್ಗಸೂಚಿಗಳಂತೆ ಧ್ವಜಾರೋಹಣ ಮಾತ್ರ ಮಾಡಲು ಸೂಚಿಸಿದ್ದರಿಂದ ಡಾ.ಬಿ.ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದಿಲ್ಲ. ಭಾವಚಿತ್ರ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುವುದಾಗಿ ನ್ಯಾಯಾಧೀಶರು ಹೇಳಿದರು ಎಂದು ಆರೋಪ ಕೇಳಿಬಂತು.


ಅನೇಕ ನ್ಯಾಯವಾದಿಗಳು ಸರ್ಕಾರ ಈಗಾಗಲೇ ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್.ಅಂಬೇಡ್ಕರ್ ಭಾವ ಚಿತ್ರ ಕಡ್ಡಾಯಗೊಳಿಸಿ ಆದೇಶ ನೀಡಿದೆ. ಆದರೆ ನ್ಯಾಯಾಧೀಶರು ತೆಗೆಯುವಂತೆ ಹೇಳುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
ಇದರಿಂದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಯಿತು. ಕೊನೆಗೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿದ ನಂತರ ಧ್ವಜಾರೋಹಣ ನೇರವೇರಿತು.

- Advertisement -


ಹೈಕೋರ್ಟನ ಉಸ್ತುವಾರಿ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸಿ ನಂತರ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರ ಅಳವಡಿಸಲಾಯಿತು. ಗಣರಾಜ್ಯೋತ್ಸವಕ್ಕೆ ಮೂಲ ಕಾರಣರಾದ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರ ಅಳವಡಿಸಲು ವಿರೋಧಿಸಿದ ನ್ಯಾಯಾಧೀಶರ ಕ್ರಮವನ್ನು ಅನೇಕ ನ್ಯಾಯವಾದಿಗಳು ಖಂಡಿಸಿದರು. ಅಂಬೇಡ್ಕರ್ ಭಾವಚಿತ್ರ ಅಳಡಿಸಲು ವಿರೋಧಿಸುವ ಮನಸ್ಥಿತಿ ಖಂಡನೀಯ ಎಂದು ವಕೀಲರು ಹೇಳಿದರು.

Join Whatsapp