ಗಣರಾಜ್ಯೋತ್ಸವ ಬಹಿಷ್ಕಾರಕ್ಕೆ ಕರೆ ನೀಡಿದ ನಾಗಾಲ್ಯಾಂಡ್‌ನ ವಿವಿಧ ಸಂಘಟನೆಗಳು !

Prasthutha|

ಕೊಹಿಮಾ: ಇತ್ತೀಚೆಗೆ ಭಾರತೀಯ ಸೇನೆ ನಡೆಸಿದ 14 ನಾಗರಿಕರ ಹತ್ಯೆಯನ್ನು ಖಂಡಿಸಿ 73ನೇ ಗಣರಾಜ್ಯೋತ್ಸವನ್ನು ಬಹಿಷ್ಕರಿಸುವಂತೆ ನಾಗಾಲ್ಯಾಂಡ್ ನ ವಿವಿಧ ಸಂಘಟನೆಗಳು ಕರೆ ನೀಡಿದೆ.

- Advertisement -

ಮಾತ್ರವಲ್ಲ ಈ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನಾಗಾ ಜನತೆಯನ್ನು ಒತ್ತಾಯಿಸಿವೆ.

ಹತ್ಯೆಗೀಡಾದ ನಾಗರಿಕರಿಗೆ ನ್ಯಾಯ ದೊರಕಿಸಿಕೊಡುವಂತೆ ಮತ್ತು ಕರಾಳ AFSPA ಕಾಯ್ದೆ ರದ್ದತಿಗೆ ಆಗ್ರಹಿಸಿ ನಾಗಾ ವಿದ್ಯಾರ್ಥಿಗಳ ಒಕ್ಕೂಟ, ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಸಂಸ್ಥೆ, ಸಂಯುಕ್ತ ನಾಗಾ ಕೌನ್ಸಿಲ್ ಸೇರಿದಂತೆ ಹಲವಾರು ಸಂಘಟನೆಗಳು ಗಣರಾಜ್ಯೋತ್ಸವ ಬಹಿಷ್ಕಾರಕ್ಕೆ ಕರೆ ನೀಡಿದೆ.

- Advertisement -

ಈ ಕುರಿತು ಮಾತನಾಡಿದ ನಾಗಾ ಸ್ಟೂಡೆಂತ್ ಫೆಡರೇಶನ್ ಅಧ್ಯಕ್ಷ ಕೆಗ್ವೇಹುನ್ ಟೆಪ್ ಮತ್ತು ಪ್ರಧಾನ ಕಾರ್ಯದರ್ಶಿ ಸುಪುನಿ ಎನ್.ಜಿ. ಫಿಲೋ, ಕೇಂದ್ರ ಸರ್ಕಾರ ನಾಗಾಲ್ಯಾಂಡನ್ನು ಸೇನಾಮಯಗೊಳಿಸುವ ನೀತಿಯನ್ನು ನಿಲ್ಲಿಸುವವರೆಗೆ ಗಣರಾಜ್ಯೋತ್ಸವ ಸೇರಿದಂತೆ ಎಲ್ಲಾ ರಾಷ್ಟ್ರೀಯ ಆಚರಣೆಗಳನ್ನು ಬಹಿಷ್ಕರಿಸುವಂತೆ ನಾಗಾ ಜನತೆಗೆ ಕರೆ ನೀಡಿದರು.

ಮಣಿಪುರದ ನಾಗಾ ಜನತೆ ತಮ್ಮ ಅಸಹಕಾರ ಚಳುವಳಿಯ ಭಾಗವಾಗಿ ಜನವರಿ 26 ರಂದು ನಡೆಯುವ ಭಾರತದ ಗಣರಾಜ್ಯೋತ್ಸವ ಆಚರಣೆಯಿಂದ ದೂರವಿರಲು ಬಯಸುತ್ತಾರೆ ಎಂದು ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ ಅಭಿಪ್ರಾಯ ವ್ಯಕ್ತಪಡಿಸಿದೆ.



Join Whatsapp