‘ಪದ್ಮಭೂಷಣ’ ಪ್ರಶಸ್ತಿ ನಿರಾಕರಿಸಿದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ

Prasthutha|

ನವದೆಹಲಿ: ಸಿಪಿಐ (ಎಂ) ಹಿರಿಯ ಮುಖಂಡ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ‘ಪದ್ಮಭೂಷಣ’ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಜೊತೆಗೆ ಬಂಗಾಳದ ಖ್ಯಾತ ಗಾಯಕಿ ಸಂಧ್ಯಾ ಮುಖರ್ಜಿ ಅವರು ಕೂಡ ಪದ್ಮಶ್ರೀ ನಿರಾಕರಿಸಿದ್ದಾರೆ.

- Advertisement -

ಪ್ರಶಸ್ತಿ ಲಭಿಸಿರುವ ಕುರಿತು ಪ್ರತಿಕ್ರಿಯಿಸಿದ ಭಟ್ಟಾಚಾರ್ಯ, ಇದರ ಬಗ್ಗೆ ನನಗೆ ತಿಳಿದಿಲ್ಲ. ಅವರು ನನಗೆ ಪದ್ಮಭೂಷಣ ನೀಡಲು ನಿರ್ಧರಿಸಿದ್ದಾರೆ. ನಾನು ಅದನ್ನು ಸ್ವೀಕರಿಸಲು ನಿರಾಕರಿಸುತ್ತೇನೆ ಎಂದು ತಿಳಿಸಿದ್ದಾರೆ.

ಸದ್ಯ ಭಟ್ಟಾಚಾರ್ಯ ಅವರು ಅನಾರೋಗ್ಯದ ಕಾರಣ ಸಕ್ರಿಯ ರಾಜಕೀಯದಿಂದ ಸ್ವಯಂ ಪ್ರೇರಿತವಾಗಿ ನಿವೃತ್ತಿ ಘೋಷಿಸಿದ್ದಾರೆ. ಈ ಹಿಂದಿನಿಂದಲೂ ಅವರು ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕಾಕಾರರಾಗಿದ್ದರು.

- Advertisement -

ಮಾಜಿ ಮುಖ್ಯಮಂತ್ರಿ ಭಟ್ಟಾಚಾರ್ಯ ಅವರು ಪದ್ಮಭೂಷಣ ನಿರಾಕರಿಸಿರುವ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಸಿಪಿಐ (ಎಂ), ಪ್ರಬುತ್ವ ನೀಡುವ ಪ್ರಶಸ್ತಿಗಳನ್ನು ನಿರಾಕರಿಸುವುದು ಸಿಪಿಐ (ಎಂ) ಪಕ್ಷದ ನೀತಿಯ ಭಾಗವಾಗಿದೆ. ನಮ್ಮ ಕಾರ್ಯಚಟುವಟಿಕೆ ಪ್ರಶಸ್ತಿಗಾಗಿ ಅಲ್ಲ, ಬದಲಾಗಿ ಜನತೆಯ ನೆಮ್ಮದಿಗಾಗಿ ಎಂಬುದು ಪಕ್ಷದ ಸಿದ್ದಾಂತ. ಈ ಹಿಂದೆಯೂ ಕೂಡ ನೀಡಲಾಗಿದ್ದ ಪ್ರಶಸ್ತಿಯನ್ನು ಕಾಮ್ರೇಡ್ ಇ.ಎಂ.ಎಸ್ (ನಂಬೂದರಿಪಾಡ್) ನಿರಾಕರಿಸಿದ್ದರು ಎಂದು ತಿಳಿಸಿದೆ.

“ಕಮ್ಯೂನಿಷ್ಟರು ಪ್ರಭುತ್ವದ ಪ್ರಶಸ್ತಿಗಳಿಗೆ ಹಾತೊರೆಯುವುದಿಲ್ಲ. ಈ ಹಿಂದೆ ಜ್ಯೋತಿ ಬಸು 2008 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನಿ ತಿರಸ್ಕರಿಸಿದ್ದರು ಎಂದು ಸಿಪಿಐ (ಎಂ) ಕೇಂದ್ರೀಯ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ತಿಳಿಸಿದ್ದಾರೆ.

Join Whatsapp