ಮುಂಬೈ: ಬಿಜೆಪಿ ಮೈತ್ರಿಯಿಂದ ಶಿವಸೇನಾ 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶಿವಸೇನೆಯು ಸ್ವತಂತ್ರವಾಗಿ ಚುನಾವಣೆ ಎದುರಿಸಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲನ್ನು ಸ್ವೀಕರಿಸಿದ್ದೇನೆ. ಮಹಾರಾಷ್ಟ್ರದ ಹೊರಗೂ ಪಕ್ಷವನ್ನು ವಿಸ್ತರಿಸಿ ದೇಶ ರಾಜಕಾರಣದಲ್ಲೂ ಪ್ರಮುಖ ಪಾತ್ರ ವಹಿಸುತ್ತೇವೆ ಎಂದು ಹೇಳಿದ್ದಾರೆ.
ಅಧಿಕಾರದ ಮೂಲಕ ಹಿಂದುತ್ವ ಅಜೆಂಡಾವನ್ನು ಮುಂದಕ್ಕೆ ಕೊಂಡೊಯ್ಯಲು ಬಿಜೆಪಿಯೊಂದಿಗೆ ಶಿವಸೇನಾ ಮೈತ್ರಿ ಮಾಡಿಕೊಂಡಿತ್ತು. ಶಿವಸೇನಾ ವೋಟಿಗಾಗಿ ಹಿಂದುತ್ವವನ್ನು ಎಂದೂ ಬಳಕೆ ಮಾಡಿಲ್ಲ. ಇನ್ನೊಂದೆಡೆ ಬಿಜೆಪಿ ರಾಜಕೀಯ ಲಾಭಕ್ಕಾಗಿ ಹಿಂದುತ್ವವನ್ನು ಬಳಸಿಕೊಂಡಿದೆ ಎಂದು ಟೀಕಿಸಿದರು.