ಬಿಜೆಪಿಗೆ ಅಧಿಕಾರ ಸಿಗದ ಹತಾಶೆಯಿಂದ SDPI ಮೇಲೆ ನಿರಾಧಾರ ಮತ್ತು ಮೂರ್ಖತನದ ಹೇಳಿಕೆ ನೀಡುತ್ತಿರುವ ಹರಿಕೃಷ್ಣ ಬಂಟ್ವಾಳ್ । ಎಸ್‌ಡಿಪಿಐ

Prasthutha|

ತಾಕತ್ತಿದ್ದರೆ ಹರಿಕೃಷ್ಣ ಬಂಟ್ವಾಳ್ ರವರು ಮಾಡಿದ ಆರೋಪವನ್ನು ಪುರಾವೆ ಸಹಿತ ಬಹಿರಂಗ ಪಡಿಸಲಿ : ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ

- Advertisement -

ಮಂಗಳೂರು: ಬಂಟ್ವಾಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಎಸ್‌ಡಿಪಿಐ ಪಕ್ಷ ದೇಶದ ಮೂಲ ಶತ್ರು ಕೋಮುವಾದಿ ಪಕ್ಷವಾದ ಬಿಜೆಪಿ ಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ನಿಟ್ಟಿನಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿತ್ತು. ಇದನ್ನು ಸಹಿಸಲು ಅಸಾಧ್ಯ ವಾದ ಬಿಜೆಪಿಯು ತನ್ನ ನೀಚ ಕೃತ್ಯವನ್ನು ಮುಂದುವರೆಸಿದೆ.  ಅಧಿಕಾರಕ್ಕೆ ಬೇಕಾಗಿ ಯಾವುದೇ ನೀಚ ರೀತಿಯ ಕುದುರೆ ವ್ಯಾಪಾರಕ್ಕೂ ಮುಂದಾಗಲು ಹೇಸದ ಪಕ್ಷ ಬಿಜೆಪಿ ಎಂಬುದು ಇಡೀ ದೇಶಕ್ಕೆ ಜಗಜ್ಜಾಹೀರಾಗಿರುವ ವಿಚಾರವಾಗಿದೆ.

ಸದ್ಯಕ್ಕೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಕುದುರೆ ವ್ಯಾಪಾರದಿಂದಲೇ ಅಧಿಕಾರಕ್ಕೆ ಬಂದಿರುವುದು ಎಂಬುದನ್ನು ಈತ ಮೆರೆತಂತಿದೆ. ಇದೀಗ ಬಿಜೆಪಿಯ ವಕ್ತಾರನಾಗಿ,  ಜೋಕರ್ ಗಳಂತೆ ವ್ಯಂಗ್ಯ ಮಾತುಗಳನ್ನು ಆಡುತ್ತಿರುವ ಹರಿಕೃಷ್ಣ ಬಂಟ್ವಾಳ್ ತಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ನಿರೀಕ್ಷೆಯಿಂದ ಶಾಸಕ, ಸಂಸದರೆಲ್ಲ ಮತ ಚಲಾವಣೆ ಮಾಡಿದರೂ ಕೊನೆ ಕ್ಷಣದಲ್ಲಿ ಅನಿರೀಕ್ಷಿತವಾಗಿ ಅಧಿಕಾರ ಕೈತಪ್ಪಿದ ಹತಾಶತನದಿಂದ ಮುಖಭಂಗಕ್ಕೆ  ಒಳಗಾಗಿ ನಿರಾಧಾರ ಮತ್ತು ಅಷ್ಟೇ ಮೂರ್ಖತನದಿಂದ ಕೂಡಿದ ಹೇಳಿಕೆಗಳನ್ನು ನೀಡುತ್ತಿದ್ದಾರೆ.

- Advertisement -

ಇವರ ಈ ರೀತಿಯ ಹೇಳಿಕೆಗಳಿಗೆ ಜನರು ಯಾವುದೇ ರೀತಿಯ ಬೆಲೆ ನೀಡುವುದಿಲ್ಲ,ಯಾಕೆಂದರೆ ಇವರ ಬೆಲೆ ಎಷ್ಟಿದೆಯೆಂದು ಜಿಲ್ಲೆಯ ಜನತೆಗೆ ತಿಳಿದಿದೆ. ಈ ಹಿಂದೆ ಕಾಂಗ್ರೆಸ್ ನಲ್ಲಿದ್ದುಕೊಂಡು ಬಿಜೆಪಿ ಯನ್ನು ಹೀಯಾಳಿಸುತ್ತಾ ಲವ್ ಜಿಹಾದ್ ಬಿಜೆಪಿಯ ಹಿಂದುತ್ವ ರಾಜಕೀಯ ಅಸ್ತೃ. ಅದನ್ನು ಚಲಾವಣೆಗೆ ತಂದದ್ದು ಬಿಜೆಪಿಯವರೇ ಎಂದು ಅದರ ನೈಜತೆ ಹೇಳುತ್ತಾ ಒಳಗಿಂದೊಳಗೆ ಬಿಜೆಪಿಗೆ ಬೆಂಬಲ ನೀಡುತ್ತಾ ತನ್ನ ನರಿ ಬುದ್ದಿಯನ್ನು ತೋರಿಸುತ್ತಿದ್ದು, ನಂತರ ಬಿಜೆಪಿಗೆ ಸೇರಿ ಲವ್ ಜಿಹಾದ್, ಹಿಂದುತ್ವ ಎಂದೆಲ್ಲಾ ಕಾಂಗ್ರೆಸ್ ನ್ನು ಹೀಯಾಳಿಸಲು ಶುರುವಿಟ್ಟುಕೊಂಡು ಇದೀಗ ಅಧಿಕಾರ ಕೈತಪ್ಪಿದ ಕಾರಣದಿಂದ ಮತಿಗೆಟ್ಟು ಎಸ್‌ಡಿಪಿಐ ಪಕ್ಷದ ಮೇಲೆ ಆಧಾರರಹಿತ ಆರೋಪ ಮಾಡಲು ಆರಂಭಿಸಿದ್ದಾರೆ.

ನಿರಾಧಾರ ಆರೋಪ ಮಾಡುವುದು, ವಿರೋಧ ಪಕ್ಷಗಳನ್ನು ಹೀಯಾಳಿಸುವುದು ಮತ್ತು ಮೈಕ್ ಸಿಕ್ಕರೆ ನಾಟಕೀಯ ಶೈಲಿಯ ಭಾಷಣ ಇವರ ದೈನಂದಿನ ಚಾಳಿಯಾಗಿದೆ ಮತ್ತು ಪ್ರಚಾರಪ್ರಿಯತನವಾಗಿದೆ. ತಾಕತ್ತಿದ್ದರೆ ಹರಿಕೃಷ್ಣ ಬಂಟ್ವಾಳ್ ನಮ್ಮ ವಿರುದ್ಧ ಮಾಡಿದ ಆರೋಪವನ್ನು ಸಾಕ್ಷಿ ಸಮೇತ ಬಹಿರಂಗಪಡಿಸಲಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp