ಮಡಿಕೇರಿ: ಫೈಲ್ ವರ್ಗಾವಣೆ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ತಾಲೂಕಿ ಕಚೇರಿಯ ಶಿರಸ್ತೆದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕುಶಾಲನಗರ ತಾಲೂಕು ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದು, ಶಿರಸ್ತೆದಾರ್ ವಿನೋದ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಅಂದಗೋಬೆ ಗ್ರಾಮದ ಬೆಳ್ಳಿಯಪ್ಪ ಅವರಿಗೆ ಶಿರಸ್ತೆದಾರ್ ವಿನೋದ್ ಫಲ್ ವರ್ಗಾವಣೆಗಾಗಿ 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ವಿಷಯವನ್ನು ಬೆಳ್ಳಿಯಪ್ಪ ಎಸಿಬಿಗೆ ತಿಳಿಸಿದ್ದಾರೆ. ಆ ಪೈಕಿ 50 ಸಾವಿರ ರೂಪಾಯಿ ಹಣವನ್ನು ಕಚೇರಿ ಬಳಿಯ ಕ್ಯಾಂಟಿನ್ ನಲ್ಲಿ ಸ್ವೀಕಾರ ಮಾಡುವ ವೇಳೆ ದಾಳಿ ನಡೆಸಿದ ಮಡಿಕೇರಿ ಎಸಿಬಿ ಅಧಿಕಾರಿಗಳ ತಂಡ ಶಿರಸ್ತೆದಾರನನ್ನು ರೆಂಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇನ್ನೂ ಲಂಚ ಸ್ವೀಕಾರ ಆರೋಪ ಎತ್ತಿರುವ ಶಿರಸ್ತೇದಾರ್ ವಿನೋದ್ ಹಾಗೂ ಗ್ರಾಮಲೆಕ್ಕಿಗ ಸಚಿನ್ ವಿಚರಣೆಯನ್ನು ನಾಡ ಕಛೇರಿಯಲ್ಲಿ ವಿಚಾರಣೆ ನಡೆಸಿದರು.