ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ !

Prasthutha|

ನವದೆಹಲಿ: ಭಾರತದ ಅತ್ಯಂತ ಯಶಸ್ವಿ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಭಾಗವಹಿಸಿದ ಸಾನಿಯಾ ಮೊದಲ ಸುತ್ತಿನಲ್ಲಿಯೇ ಸೋಲು ಅನುಭವಿಸಿದರು. ಈ ಸೋಲಿನ ಬಳಿಕ ಸಾನಿಯಾ ಮಿರ್ಜಾ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಬಗ್ಗೆ ಮಾತನಾಡಿದ್ದಾರೆ.

- Advertisement -

2022ರ ಟೆನಿಸ್ ಸೀಸನ್ ನನ್ನ ಕೊನೆಯ ಋತುವಾಗಿರಲಿದೆ. ಈ ಋತುವನ್ನು ಸಂಪೂರ್ಣಗೊಳಿಸಿದ ಬಳಿಕ ನಿವೃತ್ತಿಯಾಗುವುದಾಗಿ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.

ಸದ್ಯ ಭಾರತದ ಟೆನಿಸ್ ಆಟಗಾರ್ತಿ ಆರು ಗ್ರ್ಯಾಂಡ್ ಸ್ಲಾಮ್ ಪಂದ್ಯಾಟಗಳನ್ನು ಗೆದ್ದಿದ್ದಾರೆ ಮತ್ತು WTA ಡಬಲ್ಸ್ ಶ್ರೇಯಾಂಕದಲ್ಲಿ ಅತ್ಯುತ್ತಮ ಸಾಧನೆ ನಿರ್ವಹಿಸಿದ್ದಾರೆ. WTA ಸಿಂಗಲ್ಸ್ ಶ್ರೇಯಾಂಕದಲ್ಲಿ ಟಾಪ್ 30 ರೊಳಗೆ ಪ್ರವೇಶಿಸಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಸಾನಿಯಾ ಮಿರ್ಝಾ ಪಾತ್ರರಾಗಿದ್ದಾರೆ. ಅವರ ಈ ಸಾಧನೆಯಿಂದಾಗಿ ಕೇವಲ ಟೆನಿಸ್ ಲೋಕದ ಸೂಪರ್ ಸ್ಟಾರ್ ಆಗಿ ಮಾತ್ರವೇ ಮೆರೆಯಲಿಲ್ಲ. ತಮ್ಮ ಸೌಂದರ್ಯದಿಂದಲೂ ಸಾನಿಯಾ ಹೆಚ್ಚು ಸದ್ದು ಮಾಡಿದ್ದರು.

Join Whatsapp