ಮುಲಾಯಂ ಸಿಂಗ್ ಯಾದವ್ ಸೊಸೆ ಬಿಜೆಪಿಗೆ ಸೇರ್ಪಡೆ

Prasthutha|

ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡರು.
ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳಿರುವಾಗ ಈ ಬೆಳವಣಿಗೆ ಸಮಾಜವಾದಿ ಪಕ್ಷಕ್ಕೆ ದೊಡ್ಡ ಹೊಡೆತ ಎಂದೇ ವ್ಯಾಖ್ಯಾನಿಸಲಾಗಿದೆ.

- Advertisement -


ಯೋಗಿ ಆದಿತ್ಯನಾಥ್ ಸರ್ಕಾರದ ಹಲವು ಸಚಿವರು, ಶಾಸಕರು ಪಕ್ಷ ತೊರೆದ ಬಳಿಕ ಸಂಕಷ್ಟದಲ್ಲಿದ್ದ ಬಿಜೆಪಿಗೆ ಅಪರ್ಣಾ ಸೇರ್ಪಡೆಯಿಂದ ಸ್ವಲ್ಪ ಮಟ್ಟಿನ ಸಮಾಧಾನ ಉಂಟಾಗಿದೆ.
ಅಪರ್ಣಾ ಅವರು ಮಹಿಳೆಯರ ಸಮಸ್ಯೆಗಳಿಗೆ ಮತ್ತು ಲಕ್ನೋದಲ್ಲಿ ಹಸುಗಳಿಗೆ ಆಶ್ರಯ ನೀಡುವ “ bAware” ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಯಾದವ್ ಅವರು ಈ ಹಿಂದೆ ಪ್ರಧಾನಿ ಮೋದಿಯವರ ‘ಅಭಿವೃದ್ಧಿ ಉಪಕ್ರಮ’ಗಳನ್ನು ಹೊಗಳಿ ಸುದ್ದಿಯಲ್ಲಿದ್ದರು.

ಫೆಬ್ರವರಿ 10 ಮತ್ತು ಮಾರ್ಚ್ 7 ರ ನಡುವೆ ಏಳು ಹಂತಗಳಲ್ಲಿ ಯುಪಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ



Join Whatsapp