2021-22 ನೇ ಸಾಲಿನ ಪದವಿ ಪೂರ್ವ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

Prasthutha|

ಬೆಂಗಳೂರು: 2021-22 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ    ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು  ಬಿಡುಗಡೆ ಮಾಡಿದೆ.

- Advertisement -

ಎಪ್ರಿಲ್ 16 ರಿಂದ ಮೇ 4 ರವರೆಗೆ ಪರೀಕ್ಷೆಗಳಿಗೆ ದಿನ ನಿಗದಿಪಡಿಸಲಾಗಿದೆ.ಫೆಬ್ರವರಿ 17 ರಿಂದ ಮಾರ್ಚ್ 23 ರ ವರೆಗೆ ಪ್ರಾಯೋಗಿಕ ಪರಿಕ್ಷೆಗಳು ನಡೆಯಲಿವೆ. ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಾರ್ಚ್ 14ರಿಂದ 25 ರ ವರೆಗೆ ನಡೆಸುವುದಾಗಿ ಪದವಿಪೂರ್ವ ಶಿಕ್ಷಣ ಮಂಡಳಿಯು ಪ್ರಕಟನೆಯಲ್ಲಿ ತಿಳಿಸಿದೆ.

ಪರೀಕ್ಷೆಯ ವೇಳಾಪಟ್ಟಿಯು  ಈ ರೀತಿಯಿದೆ:

- Advertisement -

# ಎಪ್ರಿಲ್ 16: ಗಣಿತ, ಶಿಕ್ಷಣ ಶಾಸ್ತ್ರ, ಮೂಲ ಗಣಿತ

# ಎಪ್ರಿಲ್ 18: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

# ಎಪ್ರಿಲ್ 19: ಮಾಹಿತಿ ತಂತ್ರಜ್ಞಾನ

# ಎಪ್ರಿಲ್ 20: ಇತಿಹಾಸ, ಭೌತಶಾಸ್ತ್ರ

# ಎಪ್ರಿಲ್ 21:  ದ್ವಿತೀಯ ಭಾಷೆ

# ಎಪ್ರಿಲ್ 22: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

# ಎಪ್ರಿಲ್ 23: ರಸಾಯನ ಶಾಸ್ತ್ರ,ಮನಃಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ

# ಎಪ್ರಿಲ್ 25: ಅರ್ಥಶಾಸ್ತ್ರ,

# ಎಪ್ರಿಲ್ 26: ಹಿಂದಿ

# ಎಪ್ರಿಲ್ 28: ಐಚ್ಛಿಕ ಕನ್ನಡ, ಅಕೌಂಟ್ಸ್, ಭೂ ವಿಜ್ಞಾನ

# ಎಪ್ರಿಲ್ 29: ಕನ್ನಡ

# ಎಪ್ರಿಲ್ 30: ಸಮಾಜಶಾಸ್ತ್ರ, ಕಂಪ್ಯೂಟರ್ ಸೈನ್ಸ್,ಎಲೆಕ್ಟ್ರಾನಿಕ್ಸ್

# ಮೇ 2: ಭೂಗೋಳ ಶಾಸ್ತ್ರ, ಜೀವ ಶಾಸ್ತ್ರ

# ಮೇ 4: ಇಂಗ್ಲಿಷ್

Join Whatsapp