ಒಂದೇ ಒಂದು ಬಿಜೆಪಿ ಸಂಸದನಿರದ ತಮಿಳುನಾಡಿಗೆ ಕೇಂದ್ರದಿಂದ 11 ಮೆಡಿಕಲ್ ಕಾಲೇಜುಗಳು: ಕರ್ನಾಟಕದ ಪಾಲಿನ GST ಹಣವೂ ಸಿಕ್ಕಿಲ್ಲ, ಸಾಮಾಜಿಕ ತಾಣದಲ್ಲಿ ಟ್ರೋಲ್ !

Prasthutha|

ಚೆನ್ನೈ: ಕೇಂದ್ರ ಸರ್ಕಾರದ ಅನುದಾನದಿಂದ ತಮಿಳುನಾಡಿನಲ್ಲಿ ನಿರ್ಮಾಣವಾದ 11 ಮೆಡಿಕಲ್ ಕಾಲೇಜನ್ನು ನಾಳೆ ಪ್ರಧಾನಿ ಮೋದಿ ಉದ್ಘಾಟನೆ ನಡೆಸಲಿದ್ದಾರೆ ಎಂದು ಸಂಸದ ಸಿ.ಟಿ.ರವಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

- Advertisement -

ಕೇಂದ್ರದ ಈ ನಡೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ತಮಿಳುನಾಡಿನಲ್ಲಿ ಒಂದೇ ಒಂದು ಸಂಸದರನ್ನು ಹೊಂದಿರದ ಬಿಜೆಪಿ 11 ಮೆಡಿಕಲ್ ಕಾಲೇಜು ಕರುಣಿಸಿದೆ. ಅದೇ ರೀತಿ 25 ಬಿಜೆಪಿ ಸಂಸದರನ್ನು ನೀಡಿದ ಕರ್ನಾಟಕಕ್ಕೆ ಶೂನ್ಯ ಕೊಡುಗೆ ನೀಡಿದ್ದ ಬಗ್ಗೆ ಮೋದಿ ಸರ್ಕಾರವನ್ನು ಟೀಕಿಸಿ, ಕಾಲೆಳೆದಿದ್ದಾರೆ. ಅದು ಮಾತ್ರವಲ್ಲ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕಕ್ಕೆ ನ್ಯಾಯಯುತವಾಗಿ ಬರಲು ಬಾಕಿಯಿರುವ ಜಿಎಸ್ಟಿ ಪಾವತಿ ಕೂಡಾ ಇನ್ನೂ ಆಗಿಲ್ಲ ಎಂದು ನೆಟ್ಟಿಗರು ಕೇಂದ್ರದ ಮೋದಿ ಸರ್ಕಾರವನ್ನು ಮತ್ತು ರಾಜ್ಯದ 25 ಸಂಸದರ ಕಿವಿ ಹಿಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿ ಹಲವು ವರ್ಷಗಳು ಕಳೆದರೂ ಕೂಡ ಆ ಮೆಡಿಕಲ್ ಕಾಲೇಜು ನಿರ್ಮಿಸಲು ಸಂಸದ ಸಿ.ಟಿ. ರವಿಗೆ ಸಾಧ್ಯವಾಗಿಲ್ಲ. ಕರ್ನಾಟಕಕ್ಕೆ ಬರ ಪರಿಹಾರ, ಕೋವಿಡ್ ಪರಿಹಾರ, ರೈತರ ಪಾಲಿನ ಯಾವುದೇ ಪರಿಹಾರಗಳು, ಜನೋಪಕಾರಿ ಯೋಜನೆ ಮತ್ತು ಪ್ರಕೃತಿ ವಿಕೋಪಗಳಿಗೆ ಇದುವರೆಗೂ ನ್ಯಾಯಯುತ ವಾದ ಯಾವುದೇ ಪರಿಹಾರದ ಮೊತ್ತವನ್ನು ಕೇಂದ್ರ ಸರ್ಕಾರದಿಂದ ತರಲು ಸಾಧ್ಯವಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ.



Join Whatsapp