ಸಂಘಪರಿವಾರದ ವಿರುದ್ಧ ಟ್ವಿಟ್ಟರಿನಲ್ಲಿ ಬರೆಯುತ್ತಿದ್ದ ಮುಸ್ಲಿಮ್ ಯುವತಿಯರೇ ‘ಸುಲ್ಲಿ ಡೀಲ್ಸ್’ ಟಾರ್ಗೆಟ್ !

Prasthutha|

ನವದೆಹಲಿ: ಸಂಘಪರಿವಾರದ ವಿರುದ್ಧ ಟ್ವಿಟರಿನಲ್ಲಿ ವಿಮರ್ಶೆ ಮಾಡುತ್ತಿದ್ದ ಮುಸ್ಲಿಮ್ ಯುವತಿಯರನ್ನೇ ಗುರಿಯಾಗಿಸಿಕೊಂಡು ಅಶ್ಲೀಲವಾಗಿ ಚಿತ್ರೀಕರಿಸುವುದನ್ನು ಬಂಧಿತ ಸುಲ್ಲಿ ಡೀಲ್ಸ್ ಆ್ಯಪ್ ಸೃಷ್ಠಿಕರ್ತ ಓಂಕಾರೇಶ್ವರ್ ಠಾಕೂರ್ ಪೊಲೀಸ್ ತನಿಖೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಇದರಲ್ಲಿ ಮುಸ್ಲಿಮ್ ಯುವತಿಯರನ್ನೇ ಗುರಿ ಮಾಡಲಾಗುತ್ತಿದೆ. ಅಂತಹವರನ್ನೇ ಹುಡುಕಿ ಅಶ್ಲೀಲವಾಗಿ ತೋರಿಸಿ ಟ್ವಿಟ್ಟರ್ ನಲ್ಲಿ ಹರಾಜು ಹಾಕುತ್ತಿದ್ದೆವು ಎಂಬ ವಿಚಾರವನ್ನು ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

ಈ ಸಂಬಂಧ ಓಂಕಾರೇಶ್ವರನ ಮೊಬೈಲ್, ಮ್ಯಾಕ್ ಬುಕನ್ನು ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ. ಡಿಲೀಟ್ ಮಾಡಲಾದ ದಾಖಲೆಗಳನ್ನು ಮರು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂ ಧರ್ಮ, ದೇವಾಲಯಗಳು, ದೇವರ ಬಗ್ಗೆ ಅನೇಕ ಮುಸ್ಲಿಮ್ ಯುವತಿಯರು ಆಕ್ಷೇಪಾರ್ಹ ಟ್ವೀಟ್ ಮಾಡುವವರನ್ನು ಗುರುತಿಸಿ ಅವರನ್ನು ಅಶ್ಲೀಲವಾಗಿ ಚಿತ್ರಿಸಿ ಟ್ವಿಟ್ಟರ್ ನಲ್ಲಿ ಹರಾಜು ಹಾಕುತ್ತಿದ್ದೆ ಎಂದು ಆತ ಹೇಳಿಕೊಂಡಿದ್ದಾನೆ. ಇದಕ್ಕಾಗಿಯೇ ಓಂಕಾರೇಶ್ವರ್ ಮಹಸಭಾ ಎಂಬ ಹೆಸರಿನ ಗುಂಪನ್ನು ರಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಲ್ಲಿ ಸುಮಾರು 50 ಮಂದಿ ಟ್ರೋಲರ್ಸ್ ಗಳಿದ್ದಾರೆ. ಸಂಘಪರಿವಾರದ ವಿರುದ್ಧ ಹೇಳಿಕೆಗಳನ್ನು ನೀಡುವ ಮುಸ್ಲಿಮ್ ಯುವತಿಯರನ್ನೇ ಟ್ರೋಲ್ ಮಾಡುತ್ತಿದ್ದರು ಎಂಬುದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ಬಹಿರಂಗವಾಗಿದೆ. ಸುಲ್ಲಿ ಡೀಲ್ಸ್ ಅಪ್ಲಿಕೇಶನನ್ನು ರಚಿಸಿ, ಇದರಲ್ಲಿ ಮುಸ್ಲಿಮ್ ಯುವತಿಯರ ಫೋಟೋವನ್ನು ಹರಿಯಬಿಡುತ್ತಿದ್ದರು. ಈ ಬಗ್ಗೆ ವಿವಾದ ಉಂಟಾದಾಗ ಆ ದಾಖಲೆಗಳನ್ನು ಡಿಲೀಟ್ ಮಾಡಲಾಗುತ್ತಿತ್ತು. ಇದರಿಂದ ಪೊಲೀಸರಿಗೆ ಕಂಡು ಹಿಡಿಯಲು ಕಷ್ಟಸಾಧ್ಯ ಎಂದು ಓಂಕಾರೇಶ್ವರ್ ಭಾವಿಸಿದ್ದ. ಆದರೆ ಬುಲ್ಲಿ ಬಾಯಿ ಆ್ಯಪ್ ನ ನೀರಜ್ ಬಿಷ್ಣೋಯ್ ನೀಡಿದ ಸುಳಿವಿನಿಂದಾಗಿ ಓಂಕಾರೇಶ್ವರ್ ನ ದುಷ್ಕೃತ್ಯ ಬೆಳಕಿಗೆ ಬರಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಬುಲ್ಲಿ ಬಾಯಿ ಆ್ಯಪ್ ತಯಾರಿಸಿದ ನೀರಜ್ ಬಿಷ್ಣೋಯ್, ವಿಚಾರಣೆಯ ವೇಳೆ ಸುಲ್ಲಿ ಡೀಲ್ಸ್ ಆ್ಯಪ್ ನ ಓಂಕಾರೇಶ್ವರ್ ಬಗ್ಗೆ ಮಾಹಿತಿ ನೀಡಿದ್ದನು. ಈ ಸಂದರ್ಭದಲ್ಲಿ ಪೊಲೀಸ್ ತಂಡವೊಂದು ಸುಲ್ಲಿ ಡೀಲ್ಸ್ ಆ್ಯಪ್ ನ ಸೃಷ್ಟಿಕರ್ತ ಓಂಕಾರೇಶ್ವರನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ಯ ಆರೋಪಿಗಳನ್ನು 4 ದಿನ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Join Whatsapp