ಲೂಡೋ ಆಟದಲ್ಲಿ ಪರಿಚಯಗೊಂಡ ಸ್ನೇಹಿತನಿಗಾಗಿ ಮಗು ತೊರೆದು ಪಾಕಿಗೆ ಹೊರಟ ಮಹಿಳೆ

Prasthutha|

- Advertisement -

ಅಮೃತಸರ : ಮೊಬೈಲ್ ಗೇಮ್ ಲೂಡೋ ಆಡುತ್ತಿರುವ ವೇಳೆ ಪಾಕಿಸ್ತಾನಿ ಯುವಕನೊಂದಿಗೆ ಪ್ರೇಮ ಜಾಲದಲ್ಲಿ ಬಿದ್ದು, ಹೆತ್ತ ಮಗುವನ್ನೇ ಬಿಟ್ಟು ಹೋದ ಘಟನೆ ಜಲಿಯನ್‌ವಾಲಾ ಬಾಗ್‌ ಸಮೀಪದಲ್ಲಿ ನಡೆದಿದೆ.

ರಾಜಸ್ಥಾನದ ಧೋಲ್‌ಪುರದ ನಿವಾಸಿ ಶಿವಾನಿ ಮೋನು ಎಂಬುವವರು ಆರು ತಿಂಗಳ ಹಿಂದೆ ಲುಡೋ ಆಡುತ್ತಿರುವಾಗ ಪಾಕಿಸ್ತಾನದ ಯುವಕ ಅಲಿ ಎಂಬಾತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. ನಂತರ ಅಲಿ ಆಕೆಯನ್ನು ವಾಘಾ ಗಡಿಗೆ ಕರೆಯಿಸಿಕೊಂಡಿದ್ದು, ಗಡಿಯಲ್ಲಿ ಕರ್ತವ್ಯದಲ್ಲಿದ್ದ ಸುರಕ್ಷತಾ ಅಧಿಕಾರಿ ನರೀಂದರ್ ಸಿಂಗ್ ರವರು ಸಂಶಯಗೊಂಡು ವಿಚಾರಿಸಿದಾಗ ’ಪಾಕಿಸ್ತಾನದಲ್ಲಿರುವ ತನ್ನ ಸ್ನೇಹಿತರ ಬಳಿಗೆ ಹೋಗಬೇಕು’ ಎಂದು ಹೇಳಿದ್ದಾಳೆ.

- Advertisement -

ಈ ಕುರಿತು ವಿಚಾರಿಸಿದಾಗ ಆತ ನನ್ನನ್ನು ಪಾಕಿಸ್ತಾನದ ವಾಘಾ ಗಡಿಗೆ ಬರಲು ಹೇಳಿದ್ದ, ನನ್ನನ್ನು ಅಲ್ಲಿಯೇ ಇಟ್ಟುಕೊಳ್ಳುವುದಾಗಿ ಹೇಳಿದ್ದ, ಎಂದಿದ್ದಾಳೆ. ಸದ್ಯ ಈಕೆಯನ್ನು ವಿಚಾರಣೆಗೆ ಕರೆದೊಯ್ಯಲಾಗಿದೆ ಎಂದು ಪೋಲಿಸ್‌ ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp