ಉದ್ಧವ್‌ ಠಾಕ್ರೆ ಪತ್ನಿಯ ಅವಹೇಳನ ಮಾಡಿದ ಬಿಜೆಪಿ ಐಟಿ ವಿಭಾಗದ ಸದಸ್ಯ

Prasthutha|

ಮುಂಬೈ: ಬಿಜೆಪಿ ಐಟಿ ವಿಭಾಗದ ಸದಸ್ಯರೊಬ್ಬರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಅವರನ್ನು ಟ್ವಿಟ್ಟರ್ ನಲ್ಲಿ ಅವಹೇಳನ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

- Advertisement -

ಮಹಾರಾಷ್ಟ್ರ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಸದಸ್ಯ ಜಿತಿನ್ ಗಜಾರಿಯಾ, ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ರಶ್ಮಿ ಅವರ ಫೋಟೋ ಹಾಕಿ, ‘ಮರಾಠಿ ರಾಬ್ರಿ ದೇವಿ’ ಎಂದು ಬರೆದಿದ್ದಾರೆ.


ಈ ಹಿನ್ನೆಲೆಯಲ್ಲಿ ಗಜಾರಿಯಾ ಅವರನ್ನು ಮುಂಬೈ ಸೈಬರ್‌ ಅಪರಾಧ ವಿಭಾಗದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ರಶ್ಮಿ ಅವರಲ್ಲದೇ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧವೂ ಗಜಾರಿಯಾ ಟ್ವೀಟ್ ಮಾಡಿದ್ದರು.



Join Whatsapp