ಮಂಗಳೂರು: ಕೊರೋನ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದ್ದು, ಶುಕ್ರವಾರ ರಾತ್ರಿ 10 ಗಂಟೆಯಿಂದ ಆರಂಭಗೊಳ್ಳಲಿದ್ದು, ಸೋಮವಾರ ಬೆಳಗ್ಗೆ 5ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ದ. ಕ. ಜಿಲ್ಲೆಯಲ್ಲಿ ಈ ವಾರಾಂತ್ಯ ಕರ್ಫ್ಯೂನಲ್ಲಿ ಕೌಟುಂಬಿಕ ಕಾರ್ಯಕ್ರಮಗಳು ಹಾಗೂ ಮದುವೆ ಸೇರಿದಂತೆ ಪೂರ್ವನಿಗದಿತ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿದೆ. ಮದುವೆಗೆ ಒಳಾಂಗಣದಲ್ಲಿ 100 ಹಾಗೂ ಹೋರಾಂಗಣದಲ್ಲಿ 200 ಮಂದಿಗೆ ಅವಕಾಶ ನೀಡಲಾಗಿದೆ. ಹರಕೆ ಯಕ್ಷಗಾನವನ್ನು 100 ಜನರಿಗೆ ಸೀಮಿತಗೊಳಿಸಿ ಕೌಟುಂಬಿಕ ಕಾರ್ಯಕ್ರಮವಾಗಿ ನಡೆಸಬಹುದು. ಇತರ ಯಾವುದೇ ಕಾರ್ಯಕ್ರಮಗಳಿಗೆ ರಿಯಾಯಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ತಿಳಿಸಿದ್ದಾರೆ.
ಏನೆಲ್ಲ ಇರುತ್ತೆ...
* ಮೆಡಿಕಲ್ ಸ್ಟೋರ್, ಆಸ್ಪತ್ರೆಗಳು ಕಾರ್ಯನಿರ್ವಹಿಸಲಿವೆ.
* ದಿನಸಿ ಅಂಗಡಿ, ಹಾಲು, ತರಕಾರಿ, ಔಷಧ, ಪೆಟ್ರೋಲ್ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
* ಹೋಟೆಲ್ ಗಳಲ್ಲಿ ಪಾರ್ಸೆಲ್ ಸೇವೆ ಮಾತ್ರ ಇರುತ್ತದೆ
* ಐಟಿ ಹಾಗೂ ಇತರೆ ಉದ್ಯಮ ಸಂಸ್ಥೆಗಳ ಸಿಬ್ಬಂದಿ ಗುರುತಿನ ಚೀಟಿಯೊಂದಿಗೆ ಸಂಚಾರಕ್ಕೆ ಅನುಮತಿ
*ಇ–ಕಾಮರ್ಸ್ ಸೇವೆಗೆ ಅವಕಾಶ
* ರೈಲು, ವಿಮಾನ, ಬಸ್ ಸಂಚಾರ ಇರಲಿದೆ
* ಪ್ರಯಾಣ ಚೀಟಿ ಇರುವವರು ಆಟೋ, ಟ್ಯಾಕ್ಸಿ ಬಳಸಲು ಅವಕಾಶ
ಏನೆಲ್ಲ ಇರುವುದಿಲ್ಲ...
* ಸಾರ್ವಜನಿಕ ಉದ್ಯಾನಗಳು ಬಂದ್
* ಯಾವುದೇ ಪ್ರತಿಭಟನೆ, ಜಾತ್ರೆ, ರ್ಯಾ ಲಿ, ಮೆರವಣಿಗೆಗೆ ಅವಕಾಶ ಇರುವುದಿಲ್ಲ.
* ಶಾಲಾ–ಕಾಲೇಜ್ಗಳು ಬಂದ್
* ತುರ್ತು ಸೇವೆ ಬಿಟ್ಟು ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ.
* ಅನಗತ್ಯ ಓಡಾಟ, ಸಂಚಾರಕ್ಕೆ ಅವಕಾಶ ಇಲ್ಲ