ನವದೆಹಲಿ: ಪಂಜಾಬ್ ನ ಪಿರೋಝ್ ಪುರದಲ್ಲಿ ಬುಧವಾರ ಪ್ರಧಾನಿ ಮೋದಿ ಅವರ ಉದ್ದೇಶಿತ ಕಾರ್ಯಕ್ರಮವನ್ನು ಭದ್ರತಾ ಲೋಪದಿಂದಾಗಿ ರದ್ದುಗೊಳಿಸಲಾಗಿದೆ ಎಂಬ ಪ್ರಚಾರದ ಮಧ್ಯೆ ಕೇಂದ್ರ ಸರ್ಕಾರ ಸಾರ್ವಜನಿಕರ ಸಹಾನುಭೂತಿಯನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಟಿಕಾಯತ್, ಪ್ರಧಾನಿ ಪಂಜಾಬ್ ಗೆ ಬರುವಾಗ ಭದ್ರತೆಗೆ ಸಂಬಂಧಿಸಿದಂತೆ ಏನು ವ್ಯವಸ್ಥೆ ಮಾಡಿದ್ದರು? ಅವರು ಬದುಕುಳಿದಿದ್ದಾರೆ ಎಂದು ಹೇಳುವ ಸುದ್ದಿ ಇದನ್ನು ಸ್ಪಷ್ಟಪಡಿಸುತ್ತದೆ. ಇದು ಸಾರ್ವಜನಿಕರ ಸಹಾನುಭೂತಿಯನ್ನು ಪಡೆಯಲು ಅಗ್ಗದ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನ ಎಂದು ಅವರು ತಿಳಿಸಿದ್ದಾರೆ.