ಪಾಕ್, ಬಾಂಗ್ಲಾದಿಂದ ಹೊರಹಾಕಲ್ಪಟ್ಟವರಿಗೆ ಉತ್ತರ ಪ್ರದೇಶದಲ್ಲಿ ಭೂಮಿ: ಆದಿತ್ಯನಾಥ್

Prasthutha|

ಲಕ್ನೊ: ರಾಜ್ಯ ಸರ್ಕಾರ ಅತಿಕ್ರಮಣಕಾರರಿಂದ ವಶಪಡಿಸಿಕೊಂಡ ಭೂಮಿಯನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಹೊರಹಾಕಲ್ಪಟ್ಟವರು ಮತ್ತು ಉತ್ತರ ಪ್ರದೇಶದಲ್ಲಿ ವಾಸಿಸುತ್ತಿರುವ ಹಿಂದೂಗಳಿಗೆ ನೀಡಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ತಿಳಿಸಿದ್ದಾರೆ.

- Advertisement -

ತಮ್ಮ ಸರ್ಕಾರ ಎಲ್ಲಾ ಸರ್ಕಾರಿ ಪರೀಕ್ಷೆಗಳಲ್ಲಿ ಪಾರದರ್ಶಕತೆಯನ್ನು ಪರಿಚಯಿಸಿದೆ. ಆ ಮೂಲಕ ಹಿಂದಿನ ಆಡಳಿತದ ಮಾದರಿಯನ್ನು ಸಂಪೂರ್ಣ ಬದಲಾಯಿಸಿದೆ ಎಂದು ಅವರು ಹೇಳಿದರು.

“ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಗಡೀಪಾರುಗೊಂಡ ನಂತರ ದಶಕಗಳ ಕಾಲ ಮೀರತ್ ನಲ್ಲಿ ವಾಸಿಸುತ್ತಿದ್ದ ಹಿಂದೂಗಳಿಗೆ ಮನೆಗಳನ್ನು ನಿರ್ಮಿಸಲು ಅಥವಾ ಭೂಮಿಯನ್ನು ಖರೀದಿಸಲು ಇದುವರೆಗೆ ಸಾಧ್ಯವಾಗಲಿಲ್ಲ. ಕಾನ್ಪುರ ದೆಹತ್ ನಲ್ಲಿ 63 ಬಂಗಾಳಿ ಹಿಂದೂ ಕುಟುಂಬಗಳಿಗೆ ಎರಡು ಎಕರೆ ಭೂಮಿ ಮತ್ತು 200 ಚದರ ಯಾರ್ಡ್ ಗಳನ್ನು ನೀಡಿದ್ದೇವೆ. ಈ ಭೂಮಿ ‘ಭೂ ಮಾಫಿಯಾ’ದಿಂದ (ಭೂ ಕಬಳಿಕೆದಾರರು) ಮುಕ್ತಗೊಳಿಸಿದ್ದಾಗಿದೆ’ ಎಂದು ಅವರು ಹೇಳಿದರು.



Join Whatsapp