ಪ್ರಧಾನಿ ಮೋದಿ ಕಾನ್ಪುರ ಭೇಟಿ ವೇಳೆ ದಾಂಧಲೆ ಆರೋಪ: 8 ಮಂದಿಯ ವಿರುದ್ಧ ಗೂಂಡಾಕಾಯ್ದೆ

Prasthutha|

ಲಕ್ನೋ: ಕಳೆದ ವರ್ಷದ ಡಿಸೆಂಬರ್ 28 ರಂದು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ದಾಂಧಲೆಗೆ ಸಂಚು ರೂಪಿಸಿದ ಆರೋಪದಲ್ಲಿ ಕಾನ್ಪುರ ಪೊಲೀಸರು ಐವರು ಸಮಾಜವಾದಿ ಪಕ್ಷದ ಕಾರ್ಯಕರ್ತರು ಮತ್ತು ಮೂವರು ಬೆಂಬಲಿಗರ ವಿರುದ್ಧ ಗೂಂಡಾಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

ವೈರಲ್ ವೀಡಿಯೋದ ಆಧಾರದಲ್ಲಿ ತನಿಖೆ ನಡೆಸಿದ ವೇಳೆ ಪ್ರಧಾನಿ ಭೇಟಿ ನೀಡಿದ ದಿನ ಧ್ವಂಸಗೊಳಿಸಲಾದ ವಾಹನವು ಎಸ್ಪಿ ಮುಖಂಡ ಅಂಕುರ್ ಪಟೇಲ್ ಎಂಬಾತನಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.

ನೌಬಸ್ತಾದ ಆವಾಸ್ ವಿಕಾಸ್ ಕಾಲೋನಿ ನಿವಾಸಿಯಾಗಿರುವ ಮತ್ತೋರ್ವ ಮುಖಂಡ ಸಚಿನ್ ಕೇಸರ್ವಾನಿ ಎಂಬಾತನ ವಿರುದ್ಧ ಸಂಚು ಆರೋಪ ಹೊರಿಸಲಾಗಿದೆ.

- Advertisement -

ಡಿಸೆಂಬರ್ 28 ರಂದು ಕಾನ್ಪುರದಲ್ಲಿ ಪ್ರಧಾನಿ ಮೋದಿ ಜಾಥಾದ ನಂತರ ಆ ದಿನ ಸಂಜೆ ಎಸ್ಪಿ ಕಾರ್ಯಕರ್ತರು ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಬಿಜೆಪಿ ಮುಖಂಡರ ಪ್ರತಿಕೃತಿ ಧ್ವಂಸಗೊಳಿಸಿ ದಾಂಧಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಅಂಕುರ್ ಪಟೇಲ್, ಸಚಿನ್ ಕೇಸರ್ವಾನಿ, ಸುಕಾಂತ್ ಶರ್ಮಾ, ಅಭಿಷೇಕ್ ರಾವತ್, ನಿಕೇಶ್ ಕುಮಾರ್ ಯಾದವ್, ಅಂಶ್ ಜಿತೇಂದ್ರ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿತ್ತು.

ಮಾತ್ರವಲ್ಲ ಘಟನೆಯ ಬಳಿಕ ಸಮಾಜವಾದಿ ಪಕ್ಷವೂ ಕೂಡ ಐವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

Join Whatsapp