ರಾಜ್ಯದಲ್ಲಿ ಸಂಪೂರ್ಣ ಪಟಾಕಿ ನಿಷೇಧ : ಯಡಿಯೂರಪ್ಪ

Prasthutha|

ಬೆಂಗಳೂರು : ದೀಪಾವಳಿ ಹಬ್ಬದ ಸಂಭ್ರಮ ಹತ್ತಿರವಿರುವಾಗಲೇ, ರಾಜ್ಯದಲ್ಲಿ ಸಂಪೂರ್ಣವಾಗಿ ಪಟಾಕಿ ನಿಷೇಧಿಸುವ ಬಾಂಬ್ ಸಿಡಿಸಿದ್ದಾರೆ ಸಿಎಂ ಯಡಿಯೂರಪ್ಪ. ಶೀಘ್ರದಲ್ಲೇ ರಾಜ್ಯದಲ್ಲೂ ಸಂಪೂರ್ಣವಾಗಿ ಪಟಾಕಿ ನಿಷೇಧಿಸುವ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.  

- Advertisement -

ರಾಜಸ್ಥಾನ, ಒಡಿಶಾ, ದೆಹಲಿ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಪಟಾಕಿ ನಿಷೇಧಿಸಲು ನಿರ್ಧರಿಸಿವೆ. ದೀಪಾವಳಿ ಹತ್ತಿರವಾಗುತ್ತಿರುವಾಗ ವಾಯು ಮಾಲಿನ್ಯ ಹೆಚ್ಚಾಗುವ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸುವಂತೆ ಕೋರಿದ ಅರ್ಜಿಯ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸರುವ ನ್ಯಾಯಮಂಡಳಿ, ವಾಯು ಮಾಲಿನ್ಯ ಹೆಚ್ಚಾಗಿರುವ 18 ರಾಜ್ಯಗಳಿಗೆ ನೋಟಿಸ್ ಕಳುಹಿಸಿತ್ತು.

ಕೊರೊನ ಸೋಂಕು ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸುವ ಕುರಿತು ತಜ್ಞರ ವರದಿ ಪಡೆಯುತ್ತಿರುವುದಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಈಗಾಗಲೇ ಹೇಳಿದ್ದರು.  

- Advertisement -

ಈ ಹಿಂದಿನ ಸರಕಾರಗಳು ಪಟಾಕಿ ನಿಯಂತ್ರಿಸಲು ಯತ್ನಿಸಿದ್ದಾಗ, ಬಿಜೆಪಿ ಪರ ಸಂಘಟನೆಗಳ ಕಾರ್ಯಕರ್ತರು ಹಿಂದುಗಳ ಹಬ್ಬದ ಸಂಭ್ರಮಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂಬರ್ಥದಲ್ಲಿ ವಾದಿಸುತ್ತಿದ್ದರು. ಇದೀಗ ತಮ್ಮ ಅಚ್ಚುಮೆಚ್ಚಿನ ಪಕ್ಷದಿಂದಲೇ ದೀಪಾವಳಿ ಸಂದರ್ಭ ಪಟಾಕಿ ನಿಷೇಧದ ಮಾತುಕೇಳಿಬಂದಾಗ, ಯಾವ ರೀತಿ ಪ್ರತಿಕ್ರಿಯೆಗಳು ಬರಲಿವೆ ಎಂಬುದನ್ನು ಕಾದುನೋಡಬೇಕು.  



Join Whatsapp