ನವದೆಹಲಿ: ಹರಿದ್ವಾರದಲ್ಲಿ ಹಿಂದುತ್ವ ಕಾರ್ಯಕ್ರಮದಲ್ಲಿ ನೀಡಲಾದ ನರಮೇಧದ ಕರೆಗೆ ಸಂಬಂಧಿಸಿದಂತೆ ಜಾತ್ಯತೀತ ಪಕ್ಷಗಳು ತಮ್ಮ ಮೌನ ಮುರಿಯಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ –ಎನ್ ಇಸಿ ಸಭೆಯಲ್ಲಿ ಮನವಿ ಮಾಡಿದೆ.
ಸಂವಿಧಾನ ಮತ್ತು ಜಾತ್ಯತೀತ ಮೌಲ್ಯಗಳನ್ನು ಕಾಪಾಡುವ ತಮ್ಮ ಕರ್ತವ್ಯವನ್ನು ಮುಖ್ಯವಾಹಿನಿಯ ಜಾತ್ಯತೀತ ಪಕ್ಷಗಳು ಈ ಹಿಂದೆಯೇ ಮರೆತುಬಿಟ್ಟಿವೆ ಎಂದು ಪಾಪ್ಯುಲರ್ ಫ್ರಂಟ್ ನ ಎನ್ ಇಸಿ ಮತ್ತೊಂದು ನಿರ್ಣಯದಲ್ಲಿ ಹೇಳಿದೆ.
ಸಾಮಾಜಿಕ ಕಾರ್ಯಕರ್ತರು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳ ಒಂದು ಸಣ್ಣ ವರ್ಗವನ್ನು ಹೊರತುಪಡಿಸಿ, ದೇಶದಲ್ಲಿ ಕೆಲವರು ಮಾತ್ರ ಬಹಿರಂಗವಾಗಿ ಮುಸ್ಲಿಮರನ್ನು ದೇಶದಿಂದ ತೊಡೆದು ಹಾಕುವಂತೆ ಆಹ್ವಾನ ನೀಡಿದ ಈ ದ್ವೇಷದ ಕಾರ್ಯಕ್ರಮದ ವಿರುದ್ಧ ಮಾತನಾಡಿದರು.
ಚುನಾವಣೆಯ ಸಂದರ್ಭದಲ್ಲಿ ಈ ಪಕ್ಷಗಳು ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಬಳಿ ಬಂದು ಕೋಮುವಾದಿ ಫ್ಯಾಶಿಸ್ಟರಿಂದ ರಕ್ಷಣೆ ಕಲ್ಪಿಸುವುದಾಗಿ ಹೇಳುತ್ತವೆ. ಆದರೆ ಇಂದು ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಮತ್ತು ಹತ್ಯಾಕಾಂಡದ ಅಪಾಯಗಳು ಅಧಿಕವಾಗುತ್ತಿರುವುದು ಕಂಡು ಬರುತ್ತಿವೆ. ಇಂಥದ್ದರಲ್ಲಿ ಈ ಪಕ್ಷಗಳು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿವೆ. ಇದು ಕೇವಲ ತಮಗೆ ಮತ ಹಾಕಿದ ಜನರಿಗೆ ಮಾಡಿದ ದ್ರೋಹವಲ್ಲ. ಬದಲಾಗಿ ತಾವು ಬದ್ಧರಾಗಿದ್ದೇವೆ ಎಂದು ಹೇಳಿಕೊಳ್ಳುವ ಆದರ್ಶಗಳಿಗೂ ಅವರು ದ್ರೋಹ ಬಗೆಯುತ್ತಿದ್ದಾರೆ. ಒಂದು ವೇಳೆ ಪಕ್ಷಗಳು ರಾಷ್ಟ್ರ ಮತ್ತು ಜನರ ಕುರಿತಾದ ತಮ್ಮ ಕರ್ತವ್ಯವನ್ನು ನಿಭಾಯಿಸಲು ವಿಫಲವಾದರೆ, ಶೀಘ್ರದಲ್ಲೇ ಅವರು ತಮ್ಮ ರಾಜಕೀಯ ಪ್ರಸ್ತುತತೆಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ನ ಎನ್ ಇಸಿ ಪ್ರತಿಪಾದಿಸಿದೆ. ಆದುದರಿಂದ ದೇಶದ ಜಾತ್ಯತೀತ ಪಕ್ಷಗಳು ತಮ್ಮ ಮೌನ ಮುರಿದು ನರಮೇಧಕ್ಕೆ ಕರೆ ನೀಡಿದ ಈ ಶಕ್ತಿಗಳ ವಿರುದ್ಧ ಪ್ರಬಲ ಧ್ವನಿ ಎತ್ತಬೇಕೆಂದು ಪಾಪ್ಯುಲರ್ ಫ್ರಂಟ್ ಎನ್ ಇಸಿ ಕರೆ ನೀಡಿದೆ.
ಇನ್ನೊಂದು ನಿರ್ಣಯದಲ್ಲಿ, ಬಲಪಂಥೀಯ ಹಿಂದುತ್ವ ಶಕ್ತಿಗಳಿಂದ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದ ಮೇಲೆ ವ್ಯಾಪಕವಾಗಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಪಾಪ್ಯುಲರ್ ಫ್ರಂಟ್ ನ ಎನ್ ಇಸಿ ಅತೀವ್ರ ಕಳವಳ ವ್ಯಕ್ತಪಡಿಸಿದೆ. ಕಳೆದ ವರ್ಷವೊಂದರಲ್ಲೇ ದೇಶದಲ್ಲಿ ಕ್ರೈಸ್ತರು ಮತ್ತು ಅವರ ಸಭೆಗಳ ವಿರುದ್ಧ ಸುಮಾರು 300ಕ್ಕೂ ಅಧಿಕ ಹಿಂಸಾಚಾರದ ಘಟನೆಗಳಿಗೆ ದೇಶ ಸಾಕ್ಷಿಯಾಗಿದೆ ಎಂದು ವರದಿಗಳು ಬಹಿರಂಗಪಡಿಸಿವೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮತಾಂತರದ ಆರೋಪದಡಿಯಲ್ಲಿ ಸಮುದಾಯದ ಮಾನವೀಯ ಮತ್ತು ಶಿಕ್ಷಣ ಸಂಸ್ಥೆಗಳ ವಿರುದ್ಧ ದಮನಕಾರಿ ಕ್ರಮಗಳು ಇಂತಹ ಹಿಂಸಾಚಾರವನ್ನು ಪ್ರೋತ್ಸಾಹಿಸುತ್ತಿವೆ. ವಿದೇಶಿ ನಿಧಿಯನ್ನು ನಿರ್ಬಂಧಿಸುವುದು ಮತ್ತು ಕ್ರಿಶ್ಚಿಯನ್ ಧಾರ್ಮಿಕ ಸಂಸ್ಥೆಗಳಿಗೆ ಪರವಾನಗಿ ನಿರಾಕರಿಸುವುದುರೋಗಿಗಳು ಮತ್ತು ತಮ್ಮ ಉಳಿವಿಗಾಗಿ ಇಂತಹ ಉಪಕ್ರಮಗಳನ್ನು ಅವಲಂಬಿಸಿರುವ ಬಡಜನರ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಲಿದೆ. ಕೇವಲ ತಾತ್ಕಾಲಿಕ ಬೀದಿಬದಿಯ ಪ್ರತಿಭಟನೆ ಮತ್ತು ಜಾಥಾಗಳ ಬದಲಿಗೆ ಶೋಷಣೆಯನ್ನು ಇಲ್ಲದಾಗಿಸಲು ಸಂತ್ರಸ್ತರ ಗುಂಪುಗಳ ನಡುವೆ ಸ್ಥಿರವಾದ, ಒಗ್ಗಟ್ಟಿನ ಪ್ರಯತ್ನಗಳ ಅಗತ್ಯವಿದೆ. ಸಂತ್ರಸ್ತರಿಂದ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಐಕ್ಯ ಮತ್ತು ಪ್ರಜಾಸತ್ತಾತ್ಮಕ ಹೋರಾಟ ಹೊರಹೊಮ್ಮಬೇಕೆಂದು ಪಾಪ್ಯುಲರ್ ಫ್ರಂಟ್ ಆಶಿಸುತ್ತದೆ.
ಇನ್ನೊಂದು ನಿರ್ಣಯದಲ್ಲಿ ಮುಂಬರುವ ಕೋವಿಡ್ ಮೂರನೇ ಅಲೆಯನ್ನು ನಿಭಾಯಿಸುವಲ್ಲಿ ಸರ್ಕಾರದ ಸನ್ನದ್ಧತೆಯ ಕೊರತೆಯ ಬಗ್ಗೆ ಎನ್ ಇಸಿ ತನ್ನಆತಂಕವನ್ನು ವ್ಯಕ್ತಪಡಿಸಿದೆ. ಕಾರಣ ದೇಶದಲ್ಲಿ ಈಗ ಕೊರೋನ ವೈರಸ್ ಉಲ್ಬಣಿಸುತ್ತಿದೆ. ಕೋವಿಡ್ ಸಾಂಕ್ರಾಮಿಕ ಎರಡನೇ ಅಲೆಯ ಸಂದರ್ಭದಲ್ಲಿ ಸರ್ಕಾರ ತೋರಿದ ಕ್ರಿಮಿನಲ್ ನಿರ್ಲಕ್ಷ್ಯಕ್ಕೆ ದೇಶವು ಭಾರೀ ಬೆಲೆ ತೆರುವಂತಾಗಿತ್ತು. ಡಿಸೆಂಬರ್ 2021ರ ವೇಳೆಗೆ ದೇಶದಲ್ಲಿ ಲಸಿಕೆ ಸಂಪೂರ್ಣಗೊಳಿಸಲಾಗುವುದು ಎಂದು ಕಳೆದ ಮೇ ತಿಂಗಳಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಭರವಸೆ ನೀಡಿದ್ದರು.
ದುರದೃಷ್ಟವಶಾತ್, ಡಿಸೆಂಬರ್ 30ರ ಹೊತ್ತಿಗೆ ಒಟ್ಟು ಜನಸಂಖ್ಯೆಯ ಕೇವಲ 10 ಶೇಕಡಾಕ್ಕಿಂತ ಹೆಚ್ಚು ಜನರು ತಮ್ಮ ಮೊದಲ ಡೋಸನ್ನು ಸಹ ಪಡೆದಿಲ್ಲ ಮತ್ತು 64 ಶೇಕಡಾ ವಯಸ್ಕ ಜನಸಂಖ್ಯೆಯಲ್ಲಿ ಮಾತ್ರ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ. ಆರೋಗ್ಯ ಸಚಿವಾಲಯ ಈಗ 100 ಶೇಕಡಾ ಲಸಿಕೆ ಗುರಿಯ ಬಗ್ಗೆ ಮೌನವಾಗಿದೆ ಮತ್ತು ಮೂರನೇ ಅಲೆಯ ಭಯದ ನಡುವೆ ಈ ನಿರ್ಣಾಯಕ ಹಂತದಲ್ಲಿ ಸಾಪ್ತಾಹಿಕ ವ್ಯಾಕ್ಸಿನೇಷನ್ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಭಾರತದ ಲಸಿಕಾ ಕಂಪೆನಿಯಾದ ಕೋವಿನ್ ನಿಂದ ಬಹಿರಂಗವಾಗಿದೆ.
ಪರಿಸ್ಥಿತಿ ಹದಗೆಡುವ ಮೊದಲು ತ್ವರಿತ ಹಾಗೂ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ನರೇಂದ್ರ ಮೋದಿ ಸರ್ಕಾರದ “ಎಲ್ಲವೂ ಚೆನ್ನಾಗಿದೆ” ಎಂಬ ಪ್ರಚಾರ ಕಾರ್ಯ ಯಾವುದೇ ಕೆಲಸಕ್ಕೆ ಬಾರದು ಎಂದು ನಿರ್ಣಯದಲ್ಲಿ ಎಚ್ಚರಿಸಲಾಗಿದೆ.
ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಮತ್ತು ಸರ್ಕಾರ ಕಾರ್ಯಪ್ರವೃತ್ತವಾಗುವಂತೆ ತಮ್ಮ ಧ್ವನಿ ಎತ್ತುಬೇಕೆಂದು ನಾವು ದೇಶದ ಜನರಿಗೆ ಕರೆ ನೀಡುತ್ತಿದ್ದೇವೆ. ಸರಕಾರದ ಪೊಳ್ಳು ಭರವಸೆಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ನಾಗರಿಕರು ಮೂರನೇ ಅಲೆಯ ಅಪಾಯವನ್ನು ಹಗುರವಾಗಿ ಪರಿಗಣಿಸಬಾರದು. ಜೊತೆಗೆ ಬುದ್ಧಿವಂತಿಕೆಯಿಂದ ಹಾಗೂ ತ್ವರಿತವಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿರಬೇಕಾದುದು ಸರ್ಕಾರದ ಕರ್ತವ್ಯವಾಗಿರುತ್ತದೆ.
ಮೊದಲ ಮತ್ತು ಎರಡನೇ ಅಲೆಯ ವೇಳೆ ನಿಸ್ವಾರ್ಥ ಸೇವೆಗಳ ಮೂಲಕ ಜನರಿಗೆ ನೆರವು ನೀಡಿದ್ದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಇದೀಗ ಮತ್ತೊಮ್ಮೆ ಸಿದ್ಧರಾಗಬೇಕು ಮತ್ತು ಅಗತ್ಯ ಬಿದ್ದರೆ ಸ್ಥಳೀಯ ಅಧಿಕಾರಿಗಳೊಂದಿಗೆ ಜೊತೆ ಗೂಡಿ ಅರ್ಹರಿಗೆ ಮಾನವೀಯ ಹಾಗೂ ರಕ್ಷಣಾ ಸೇವೆ ಕಲ್ಪಿಸಬೇಕು ಎಂದು ಎನ್ ಇಸಿ ಆಗ್ರಹಿಸಿದೆ.