ಪಾಕಿಸ್ತಾನ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಕೇಂದ್ರವನ್ನು ಒತ್ತಾಯಿಸಿದ ಅಮರಿಂದರ್ ಸಿಂಗ್

Prasthutha|

ನವದೆಹಲಿ: ಕರ್ತಾರ್ ಪುರ ಸಾಹಿಬ್ ಗೆ ಆಧಾರ್ ಕಾರ್ಡ್ ನೊಂದಿಗೆ ಯಾತ್ರಾರ್ಥಿಗಳು ಪ್ರವೇಶಿಸುವಂತಾಗಲು ಪಾಕಿಸ್ತಾನ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಂಗಳವಾರ ಕೇಂದ್ರವನ್ನು ಒತ್ತಾಯಿಸಿದ್ದಾರೆ.

- Advertisement -

ನನ್ನ ಅಧಿಕಾರಾವಧಿಯಲ್ಲಿ ಪಂಜಾಬ್ ಸರ್ಕಾರ ಕಾರಿಡಾರ್ ಮೂಲಕ ಕರ್ತಾರ್ ಪುರ ಸಾಹಿಬ್ ಗೆ ಪ್ರವೇಶಿಸುವ ಯಾತ್ರಾರ್ಥಿಗಳಿಗೆ $ 20 ಶುಲ್ಕವನ್ನು ಭರಿಸುವುದಾಗಿ ಘೋಷಿಸಿತ್ತು. ಆದರೆ ಕೋವಿಡ್ ನಿರ್ಬಂಧಗಳಿಂದಾಗಿ ಮಾರ್ಗಗಳನ್ನು ಮುಚ್ಚಲಾಗಿತ್ತು. ಪವಿತ್ರ ದೇಗುಲದ ‘ ಖುಲೆ ದರ್ಶನ್ ದಿದರ್’ ಕುರಿತು ಖಚಿತಪಡಿಸುವಂತೆ GOP ತನ್ನ ನಿರ್ಧಾರವನ್ನು ಜಾರಿಗೊಳಿಸಲಿ ಎಂದು ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ಪಾಸ್ ಪೋರ್ಟ್ ನೊಂದಿಗೆ ಕರ್ತಾರ್ ಪುರ ಸಾಹಿಬ್ ಗೆ ಯಾತ್ರಾರ್ಥಿಗಳು ಭೇಟಿ ನೀಡುವ ನಿಯಮವನ್ನು ಸರ್ಕಾರ ಬದಲಾಯಿಸಬೇಕು. ಯಾತ್ರಾರ್ಥಿಗಳಿಗೆ ಅನುಕೂಲಮಾಡುವ ನಿಟ್ಟಿನಲ್ಲಿ ಆಧಾರ್ ಕಾರ್ಡ್ ನೊಂದಿಗೆ ಪ್ರವೇಶಕ್ಕೆ ಅನುಮತಿಸಲು ಪಾಕಿಸ್ತಾನ ಸರ್ಕಾರದೊಂದಿಗೆ ಕೆಲಸ ಮಾಡಲು GOI ಅನ್ನು ಒತ್ತಾಯಿಸಿದ್ದಾರೆ.

Join Whatsapp