ಅಮೇಠಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಆಕಸ್ಮಿಕ ಹಿಂದೂ ಎಂದು ಟೀಕಿಸಿದ್ದಾರೆ.
ದೇವಸ್ಥಾನದಲ್ಲಿ ಯಾವ ರೀತಿ ಕುಳಿತುಕೊಳ್ಳಬೇಕು ಎಂಬ ಅರಿವಿಲ್ಲದ, ಆಕಸ್ಮಿಕವಾಗಿ ಹಿಂದೂಗಳಾದವರು ಈಗ ಹಿಂದೂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸದ ಬಗ್ಗೆ ಉಪನ್ಯಾಸ ನೀಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.
ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ನೇರವೇರಿಸಿದ ಬಳಿಕ ಜಗದೀಶ್ ಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದೇಶಿಸಿ ಮಾತನಾಡಿದ ಆದಿತ್ಯನಾಥ್, ಕಳೆದ ಗುಜರಾತ್ ವಿಧಾನಸಭೆ ಚುನಾವಣೆಯ ವೇಳೆ ದೇವಸ್ಥಾನಕ್ಕೆ ತೆರಳಿದ್ದಾಗ ಯಾವ ರೀತಿ ಕುಳಿತುಕೊಳ್ಳಬೇಕು ಎಂಬುದು ರಾಹುಲ್ ಗೆ ತಿಳಿದಿರಲಿಲ್ಲ. ಅವರು ಮಂಡಿಯೂರಿ ಕುಳಿತಿದ್ದನ್ನು ನೋಡಿ ಅಲ್ಲಿನ ಅರ್ಚಕರು ರಾಹುಲ್ ಅವರಿಗೆ ತಿಳಿ ಹೇಳಿದ್ದರು.
ಪ್ರಸಕ್ತ ಈ ರೀತಿಯ ಸಂಸ್ಕಾರ ಹೀನರು ಹಿಂದೂ ಮತ್ತು ಹಿಂದುತ್ವದ ಬಗ್ಗೆ ಅಪಪ್ರಚಾರ ಮಾಡಿದರೆ ಅದು ಅವರ ತಿಳುವಳಿಕೆಯ ಕೊರತೆ ಎಂದು ಆದಿತ್ಯನಾಥ್ ಟೀಕಿಸಿದ್ದಾರೆ.