ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷೆ ಹುದ್ದೆ ತ್ಯಜಿಸಿದ ಸುಧಾಮೂರ್ತಿ

Prasthutha|

ಹೈದರಾಬಾದ್: ದೇಶದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಹುದ್ದೆಯನ್ನು ಸುಧಾ ಮೂರ್ತಿ ತ್ಯಜಿಸಿದ್ದಾರೆ.

- Advertisement -

ಸುಧಾ ಮೂರ್ತಿ 1996ರಲ್ಲಿ ಇನ್ಫೋಸಿಸ್ ಪ್ರತಿಷ್ಠಾನವನ್ನು ಆರಂಭಿಸಿದ್ದರು.


1950ರ ಆಗಸ್ಟ್ 19 ಶಿಗ್ಗಾಂವ್‌ನಲ್ಲಿ ಜನಿಸಿದ ಸುಧಾ ಮೂರ್ತಿಯವರು ಬಿವಿಬಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ.ಬಳಿಕ 1974 ರಲ್ಲಿ ಪುಣೆಯಲ್ಲಿ ಟೆಲ್ಕೊ (ಟಾಟಾ ಇಂಜಿನಿಯರಿಂಗ್ ಮತ್ತು ಲೊಕೊಮೊಟಿವ್ ಕಂಪನಿ)ದಲ್ಲಿ ಇಂಜಿನಿಯರ್‌ ವೃತ್ತಿಜೀವನ ಆರಂಭಿಸಿದ್ದಾರೆ.

- Advertisement -


ದೇಶಾದ್ಯಂತ ಪ್ರವಾಹ ಪೀಡಿತ ಪ್ರದೇಶಗಳಲ್ಲಿ 2,300 ಮನೆಗಳ ಜೊತೆಗೆ 16,000 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಸುಧಾಮೂರ್ತಿ ಗಮನ ಸೆಳೆದಿದ್ದರು.



Join Whatsapp