ಕರಾವಳಿಯ ಕುದುರುಗಳ ಅಧ್ಯಯನಕ್ಕೆ ಪಿಎಚ್ ಡಿ ಪದವಿ

Prasthutha|

- Advertisement -

ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾರ್ಥಿ ದಿವ್ಯಸಾಲಿಯಾನ್ ಇವರು ಮಂಡಿಸಿದ 'ಕರಾವಳಿಯ ಕುದುರುಗಳ ಸಾಂಸ್ಕೃತಿಕ ಅಧ್ಯಯನ' ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್ ಡಿ ಪದವಿ ನೀಡಿದೆ.

ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಇವರ ಮಾರ್ಗದರ್ಶನದಲ್ಲಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯ ಕುದುರುಗಳಕ್ಷೇತ್ರಕಾರ್ಯ ನಡೆಸಿ ಈ ಮಹಾಪ್ರಬಂಧ ಸಿದ್ಧಪಡಿಸಲಾಗಿತ್ತು. ಕರಾವಳಿಯ ಕುದುರುಗಳ ಸಮಸ್ಯೆಗಳು, ಸಾಮಾಜಿಕ,ಧಾರ್ಮಿಕ ಸ್ಥಿತಿಗತಿಗಳು, ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು, ಪ್ರವಾಸೋದ್ಯಮದ ಸಾಧ್ಯತೆಗಳು ಹೀಗೆ ಹಲವು ವಿಚಾರಗಳ ಕುರಿತು ಪ್ರಬಂಧ ಬೆಳಕು ಚೆಲ್ಲಿದೆ.

- Advertisement -

ಪುತ್ತೂರು ಸಮೀಪದ ಗುಂಪಕಲ್ಲಿನವರಾದ ದಿವ್ಯ ಸಾಲಿಯಾನ್ ಪ್ರಸ್ತುತ ಸುಳ್ಯದ ಸರಕಾರಿ

ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.



Join Whatsapp