ಕೋಹಿಮಾ: ಈಶಾನ್ಯ ರಾಜ್ಯಗಳಲ್ಲಿ AFSPA ಕಾಯ್ದೆಯ ಅವಧಿಯನ್ನು ಕನಿಷ್ಠ 6 ತಿಂಗಳಿಗೆ ವಿಸ್ತರಿಸುವ ಕೇಂದ್ರ ಗೃಹ ಸಚಿವಾಲಯದ ನಿರ್ಧಾರವನ್ನು ವಿರೋಧಿಸಿ ನಾಗಾಲ್ಯಾಂಡ್ ನಾಗರಿಕ ಒಕ್ಕೂಟ ಮತ್ತು ಹಲವು ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿವೆ.
ಕೇಂದ್ರ ಸರ್ಕಾರ ಗುರುವಾರ ಇಡೀ ನಾಗಾಲ್ಯಾಂಡನ್ನು ಗಲಭೆ ಪೀಡಿತ ಪ್ರದೇಶ ಎಂದು ಘೋಷಿಸಿದೆ ಮತ್ತು ಭಾರೀ ವಿರೋಧದ ನಡುವೆಯೂ AFSPA ಕಾಯ್ದೆಯನ್ನು ಆರು ತಿಂಗಳವರೆಗೆ ವಿಸ್ತರಿಸಿದೆ.
ಇತ್ತೀಚೆಗೆ ನಾಗಾಲ್ಯಾಂಡ್ ನಲ್ಲಿ ಭದ್ರತಾ ಪಡೆಗಳು ಹದಿನಾಲ್ಕು ಕೂಲಿ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ನಡೆಸಿದ ಬಳಿಕ ನಾಗಾಲ್ಯಾಂಡ್ ಅಸೆಂಬ್ಲಿಯಲ್ಲಿ AFSPA ಕಾಯ್ದೆಯನ್ನು ಹಿಂಪಡೆಯುವ ನಿರ್ಣಯವನ್ನು ಅಂಗೀಕರಿಸಲಾಗಿತ್ತು.
ಘಟನೆಯ ಬಳಿಕ ನಾಗಾಲ್ಯಾಂಡ್ ಮತ್ತು ನೆರೆಯ ಮೇಘಾಲಯ ರಾಜ್ಯಗಳ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ಮುಖಂಡರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸ್ಥಳೀಯ ನಾಗರಿಕರು AFSPA ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.