ಸ್ಟೇಟ್‌ಬ್ಯಾಂಕ್ ರಸ್ತೆಗೆ “ಹರೇಕಳ ಹಾಜಬ್ಬ ಹೆಸರು”

Prasthutha|

ಮಂಗಳೂರು: ಸ್ಟೇಟ್ ಬ್ಯಾಂಕ್ ಎದುರಿನ ವೃತ್ತದಿಂದ ರಾವ್ ಆ್ಯಂಡ್ ರಾವ್ ವೃತ್ತದವರೆಗಿನ ರಸ್ತೆಗೆ ‘ಪದ್ಮಶ್ರೀ ಹರೇಕಳ ಹಾಜಬ್ಬ ರಸ್ತೆ’ ಎಂದು ನಾಮಕರಣ ಮಾಡುವ ಬಗ್ಗೆ ಕಾರ್ಯಸೂಚಿ ಮಂಡಿಸಲಾಗಿದ್ದು, ಸದಸ್ಯ ಅಬ್ದುಲ್ ಲತೀಫ್ ಇದನ್ನು ಮಂಡಿಸಿದರು.

- Advertisement -

ಇದರ ಮುಂದಿನ ಕ್ರಮಕ್ಕಾಗಿ ಸ್ಥಾಯೀ ಸಮಿತಿಗೆ ಕಳುಹಿಸಲಾಯಿತು. ಬೋಳಾರ ವಾರ್ಡ್‌ನ ಮೋರ್ಗನ್ ಗೇಟ್ ವೃತ್ತದಿಂದ ರಾ.ಹೆ. 66ನ್ನು ಸಂಪರ್ಕಿಸುವ ರಸ್ತೆಗೆ ‘ಶ್ರೀ ಶ್ರೀ ಭಿಕ್ಷು ಲಕ್ಷ ಣಾನಂದ ಸ್ವಾಮೀಜಿ ರಸ್ತೆ’ ಎಂದು ನಾಮಕರಣ ಮಾಡಲು ಜಪ್ಪು ರಾಮಕ್ಷತ್ರಿಯ ಸೇವಾ ಸಂಘ ಮಾಡಿದ ಮನವಿಯನ್ನು ಕೂಡ ಸಭೆಯಲ್ಲಿ ಮಂಡಿಸಲಾಯಿತು.

Join Whatsapp