ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರು ಮತ್ತು ವಿಟ್ಲ ಪಟ್ಟಣ ಪಂಚಾಯತ್ ಹಾಗೂ ಉಡುಪಿಯ ಕಾಪು ಪುರಸಭೆ ಸೇರಿದಂತೆ ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಸೋಮವಾರ (ಡಿ. 27) ಮತದಾನ ನಡೆದಿದ್ದು, ಇಂದು ಮತ ಏಣಿಕೆ ಕಾರ್ಯ ಆರಂಭವಾಗಿದೆ.
5 ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯತ್ ಸಹಿತ ಒಟ್ಟು 58 ನಗರ ಸ್ಥಳೀಯ ಸಂಸ್ಥೆಗಳ ಮತ ಏಣಿಕೆ ನಡೆಯಲಿದ್ದು, ಬಿಜೆಪಿಯ 1,048, ಕಾಂಗ್ರೆಸ್ ನ 1,047, ಜೆಡಿಎಸ್ ನ 244 ಹಾಗೂ ಪಕ್ಷೇತರರು 910 ಸೇರಿ ಒಟ್ಟು 3,440 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
11 ಗಂಟೆಗೆ ಸುಮಾರಿಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.