ರೈಲು ವಿಳಂಬದಿಂದ `KPSC’ ಪರೀಕ್ಷೆ ವಂಚಿತರಾದವರಿಗೆ ನಾಳೆ ಮರು ಪರೀಕ್ಷೆ

Prasthutha|

ಬೆಂಗಳೂರು : ರೈಲು ವಿಳಂಬದಿಂದಾಗಿ ಪಿಡಬ್ಲುಡಿ ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿ ಪರೀಕ್ಷೆಯಿಂದ ವಂಚಿತರಾದವರಿಗೆ ಡಿಸೆಂಬರ್ 29 ಕ್ಕೆ ಮರು ಪರೀಕ್ಷೆಗೆ ಕೆಪಿಎಸ್ ಸಿ ಅವಕಾಶ ನೀಡಿದೆ.

- Advertisement -

ಬೆಂಗಳೂರಿನಲ್ಲಿ ಮರು ಪರೀಕ್ಷೆಯನ್ನು ಆಯೋಜಿಸಲಾಗಿದ್ದು, ಕೆಪಿಎಸ್ ಸಿ ನೀಡಿದ್ದ ಕರೆಯಂತೆ 600 ಕ್ಕೂ ಹೆಚ್ಚು ಅಭ್ಯರ್ಥಿಗಳು ಮರು ಪರೀಕ್ಷೆಗೆ ಅವಕಾಶ ಕೋರಿ ದಾಖಲೆಗಳನ್ನು ಸಲ್ಲಿಸಿದ್ದರು. ಅವುಗಳ ಪರಿಶೀಲನೆ ನಡೆಸಿದ ಹೊಸದಾಗಿ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಈವರೆಗೆ ಸುಮಾರು 598 ಅಭ್ಯರ್ಥಿಗಳು ಪ್ರವೇಶ ಪತ್ರ ಪಡೆದಿದ್ದು, ಅವರೆಲ್ಲರೂ ಪರೀಕ್ಷೆಗೆ ಹಾಜರಾಗುವ ಸಾಧ್ಯತೆ ಇದೆ.

ಡಿಸೆಂಬರ್ 14 ರಂದು ರೈಲು ವಿಳಂಬದಿಂದ ಪರೀಕ್ಷೆಯ ಬೆಳಗಿನ ಸಾಮಾನ್ಯ ಪತ್ರಿಕೆ-1 ನ್ನು ವಂಚಿತರಾದವರಿಗೆ ಮಾತ್ರ ಡಿಸೆಂಬರ್ 29 ರಂದು ಮರು ಪರೀಕ್ಷೆ ನಡೆಸಲಾಗುತ್ತದೆ ಎಂದು ಕೆಪಿಎಸ್ ಸಿ ಪ್ರಕಟಣೆಯಲ್ಲಿ ತಿಳಿಸಿದೆ.



Join Whatsapp