ಧರ್ಮಕ್ಕೆ ಸಂಕಷ್ಟ ಬಂದಾಗ ತಲ್ವಾರ್ ಹಿಡಿಯಬೇಕು ಎಂದ ಬಿಜೆಪಿ ಶಾಸಕ

Prasthutha|

ಬೆಳಗಾವಿ: ಧರ್ಮಕ್ಕೆ ಸಂಕಷ್ಟ ಬಂದಾಗ ಪ್ರತಿಯೊಬ್ಬ ತಲ್ವಾರ್ ಹಿಡಿದು ಹೊರ ಬರಬೇಕು ಎಂದು ಹೈದರಾಬಾದ್‌ನ ಭಾಗ್ಯನಗರ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

- Advertisement -

ಬೆಳಗಾವಿ ತಾಲೂಕಿನ ಗಣೇಶ್ ಭಾಗ್‌ನಲ್ಲಿ ಸಂಘಪರಿವಾರ ಆಯೋಜಿಸಿದ್ದ ‘ಸ್ನೇಹಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ ನಾವೆಲ್ಲರೂ ದೇಶ, ಧರ್ಮದ ಸಲುವಾಗಿ ಸಂಘಟಿತರಾಗಿ ಕೆಲಸ ಮಾಡಬೇಕು. ದೇಶದಲ್ಲಿ ಮೋದಿ ಸರ್ಕಾರ ಇದೆ. ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ಇದೆ. ಆದ್ರೆ, ಧರ್ಮಕ್ಕೆ ಸಂಕಟ ಬಂದಾಗ ಸರ್ಕಾರ ಮುಂದೆ ಬರಲ್ಲ. ಧರ್ಮಕ್ಕೆ ಸಂಕಷ್ಟ ಬಂದಾಗ ನೀವೇ ಕೈಯಲ್ಲಿ ತಲ್ವಾರ್ ಹಿಡಿದು ಹೊರ ಬರಬೇಕು” ಎಂದು ಹೇಳಿದ್ದಾರೆ.

ಹಿಂದೂಗಳನ್ನು ಮತಾಂತರ ಮಾಡುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಪ್ರತಿ ಗ್ರಾಮದಲ್ಲೊಂದು ಸೇನೆ ನಿರ್ಮಿಸುವುದಾಗಿ ಸಂಘಪರಿವಾರದ ಕಾರ್ಯಕರ್ತರು ಸಂಕಲ್ಪ ಮಾಡಬೇಕು. ಮತಾಂತರ ತಡೆಯಲು ಈ ಸೇನೆ ಕಾರ್ಯಪ್ರವೃತ್ತರಾಗಬೇಕು. ಎಲ್ಲೆಡೆ ಈಗ ಹಣ ನೀಡಿ ಮತಾಂತರ ಮಾಡಲಾಗುತ್ತಿದೆ ಎಂದು ರಾಜಾಸಿಂಗ್ ಆರೋಪಿಸಿದರು.



Join Whatsapp