ಢಾಕ: ದಕ್ಷಿಣ ಬಾಂಗ್ಲಾದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಜನ ತುಂಬಿದ್ದ ದೋಣಿಯೊಂದರಲ್ಲಿ ಬೆಂಕಿ ಅವಘಡ ಉಂಟಾದುದರಿಂದ ಕನಿಷ್ಠ 32 ಜನರು ಸಾವಿಗೀಡಾಗಿರುವುದಾಗಿ ವರದಿಯಾಗಿದೆ.
ಮೂರು ತಳಗಳ ದೋಣಿಯು ನದಿಯ ಮಧ್ಯ ಭಾಗದಲ್ಲಿದ್ದಾಗ ದೋಣಿಯಲ್ಲಿ ಬೆಂಕಿ ಕಾಣಿಸಿದೆ. ಕೆಲವರನ್ನು ರಕ್ಷಿಸಲು ಸಾಧ್ಯವಾಗಿದ್ದು, 32 ಶವಗಳನ್ನು ಹೊರತೆಗೆಯಲಾಗಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೊಯಿನುಲ್ ಇಸ್ಲಾಂ ಹೇಳಿದ್ದಾರೆ.
ರಾಜಧಾನಿಯಿಂದ 250 ಕಿಲೋಮೀಟರ್ ದೂರದ ಜಕಾಕತಿ ಬಳಿ ಈ ಬೆಂಕಿ ದುರಂತ ನಡೆದಿದೆ. ಇಲ್ಲಿನ ದೋಣಿಗಳಲ್ಲಿ ರಕ್ಷಕ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರ ಬಗ್ಗೆ ದೂರುಗಳಿವೆ.