ಛತ್ತೀಸ್ ಗಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಗೆಲುವು; ಬಿಜೆಪಿಗೆ ಹಿನ್ನಡೆ

Prasthutha|

ರಾಯಿಪುರ: ಛತ್ತೀಸ್ ಗಡದ 15 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ 300 ವಾರ್ಡ್ ಗಳಲ್ಲಿ 174 ಕಡೆ ಜಯ ಗಳಿಸುವ ಮೂಲಕ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ.

- Advertisement -


ಬಿಜೆಪಿಯು 89 ಕಡೆ ಜಯಗಳಿಸಿದೆ. ಈಗಾಗಲೇ ಅಧಿಕಾರದಲ್ಲಿದ್ದ ನಗರ ಸಂಸ್ಥೆಗಳನ್ನು ಅದು ಕಳೆದುಕೊಂಡಿದೆ. ಉಳಿದ ಸ್ಥಾನಗಳು ಪಕ್ಷೇತರರು ಮತ್ತು ಇತರ ಪಕ್ಷಗಳ ಪಾಲಾಗಿದೆ.
ಪಕ್ಷೇತರರು 31 ಕಡೆ ಮತ್ತು ಜನತಾ ಕಾಂಗ್ರೆಸ್ ಪಕ್ಷವು 6 ಕಡೆ ಗೆದ್ದಿದೆ. ಚುನಾವಣಾ ಆಯೋಗವು ಇನ್ನೂ 70 ಕ್ಷೇತ್ರಗಳ ಫಲಿತಾಂಶವನ್ನು ಪ್ರಕಟಿಸಬೇಕಾಗಿದೆ.

Join Whatsapp