ಇಸ್ರೋದ ಕಿರಿಯ ವಿಜ್ಞಾನಿಯಾಗಿ ನಾಝ್ನಿನ್ ಯಾಸ್ಮಿನ್ ನೇಮಕ

Prasthutha|

ಗುವಾಹಟಿ: ಅಸ್ಸಾಮಿನ ನಾಗಾಂವ್ ಜಿಲ್ಲೆಯ ಜುರಿಯಾ ಪಟ್ಟಣದವರಾದ ತೇಜ್ ಪುರ್ ವಿಶ್ವವಿದ್ಯಾಲಯದ M.Tech ಪದವಿ ಪಡೆದ ನಾಝ್ಮಿನ್ ಯಾಸ್ಮಿನ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಕಿರಿಯ ವಿಜ್ಞಾನಿಯಾಗಿ ಅರ್ಹತೆ ಪಡೆದುಕೊಂಡಿದ್ದಾರೆ.

- Advertisement -


ಯಾಸ್ಮಿನ್ ಗೌಹಾತಿ ವಿಶ್ವವಿದ್ಯಾಲಯದ ಅಧೀನದಲ್ಲಿ NITS ಮಿರ್ಝಾ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ನಲ್ಲಿ B.Tech ಪೂರ್ಣಗೊಳಿಸಿದ್ದು, 2016ರಲ್ಲಿ ತೇಜ್ಪುರ್ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆ M.Tech ಪಡೆದಿದ್ದಾರೆ.

“ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಕಥೆಯಿಂದ ನಾನು ಪ್ರೇರೇಪಿತನಾಗಿದ್ದೆ. ನನ್ನ ಬಾಲ್ಯದಿಂದಲೂ ರಾಕೆಟ್ ಹೇಗೆ ಉಡಾವಣೆಯಾಗುತ್ತದೆ ಎಂಬುದನ್ನು ನೋಡುವ ಕುತೂಹಲವಿತ್ತು. ಅದುವೇ ನನ್ನನ್ನು ಈ ಮಟ್ಟಕ್ಕೆ ಕೊಂಡೊಯ್ಯಿತು” ಎಂದು ಯಾಸ್ಮಿನ್ ಹೇಳಿದರು.

- Advertisement -


“M.Tech ಪೂರ್ಣಗೊಳಿಸಿದ ನಂತರ ನಾನು ನನ್ನ ವಿಜ್ಞಾನಿ ಸ್ನೇಹಿತರ ಸಹಾಯವನ್ನು ಪಡೆದುಕೊಂಡು ರಾಕೆಟ್ ವಿಜ್ಞಾನಿಯಾಗುವುದು ಹೇಗೆ ಎಂದು ಗೂಗಲ್ ನಲ್ಲಿ ಹುಡುಕಿದೆ” ಎಂದು ಅವರು ತಿಳಿಸಿದ್ದಾರೆ.



Join Whatsapp