ದೇಶದ ಜನತೆಗೆ ಬೂಸ್ಟರ್ ಡೋಸ್ ಸಿಗುವುದು ಯಾವಾಗ?: ರಾಹುಲ್ ಗಾಂಧಿ

Prasthutha|

ನವದೆಹಲಿ: ಕೊರೊನಾ ವೈರಸ್‌ ನ ಮೂರನೇ ಅಲೆ ಬಾರದಂತೆ ತಡೆಯಲು ದೇಶದ ಜನತೆಗೆ ಬೂಸ್ಟರ್‌ ಡೋಸ್‌ ನ ಅಗತ್ಯವಿದೆ, ಇದನ್ನು  ಸರ್ಕಾರ ನೀಡುವುದು ಯಾವಾಗ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

- Advertisement -

ಕೊರೊನಾ ವೈರಸ್ ಮೂರನೇ ಅಲೆ ತಡೆಗಟ್ಟುವ ಹಿನ್ನೆಲೆಯಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಶೇ.60 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಬೇಕಿತ್ತು, ಆದರೆ ಕೇವಲ ಶೇ42 ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಪ್ರತಿದಿನ 55.3 ಮಿಲಿಯನ್ ಡೋಸ್ ಲಸಿಕೆ ಕೊರತೆಯಿದೆ. ದೇಶದ ಬಹುಸಂಖ್ಯಾತ ಜನರಿಗೆ ಇನ್ನೂ ಲಸಿಕೆ ನೀಡಿಲ್ಲ, ಹೀಗಿರುವಾಗ ಭಾರತ ಸರ್ಕಾರ ಬೂಸ್ಟರ್ ಡೋಸ್ ಯಾವಾಗ ನೀಡಲಿದೆ ಎಂದು ಪ್ರಶ್ನಿಸಿದೆ.

- Advertisement -

ಮೂರನೇ ಅಲೆ ವಿರುದ್ಧ ಹೋರಾಡಲು ಡಿಸೆಂಬರ್ 2021ರ ವೇಳೆಗೆ ದೇಶದ ಶೇ.60 ರಷ್ಚು ಜನರಿಗೆ ಲಸಿಕೆ ನೀಡಬೇಕಿತ್ತು, ಆದರೆ ಆಗಲಿಲ್ಲ, ಪ್ರತಿದಿನ ಲಸಿಕೆ ಕೊರತೆ ಎದುರಾಗುತ್ತಿದೆ ಎಂದು ದೂರಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ ಲಸಿಕೆ ನೀಡುವ ವೇಗವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸರ್ಕಾರ ದೇಶದ ಜನರಿಗೆ ಲಸಿಕೆ ನೀಡಿರುವ ಬಗ್ಗೆ ಅಂಕಿ ಅಂಶ ಹಂಚಿಕೊಂಡಿರುವ ರಾಹುಲ್ ಗಾಂಧಿ ಬೂಸ್ಟರ್ ಡೋಸ್ ಯಾವಾಗ ನೀಡಲಿದ್ದೀರಿ ಎಂದು ಪ್ರಶ್ನಿಸಿದೆ. ಇಂಟ್ರಾನೇಸಲ್ ಕೋವಿಡ್-19 ಲಸಿಕೆಯ 3 ನೇ ಹಂತದ ಪ್ರಯೋಗಕ್ಕೆ ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಭಾರತದ ಔಷಧ ನಿಯಂತ್ರಕ (ಡಿಸಿಜಿಐ) ದಿಂದ ಅನುಮತಿ ಕೇಳಿದೆ. ಇಂಟ್ರಾನೇಸಲ್ (ಬಿಬಿವಿ154) ಕೋವಿಡ್-19 ಲಸಿಕೆಯನ್ನು ಕೊರೋನಾ ವಿರುದ್ಧ ಬೂಸ್ಟರ್ ಡೋಸನ್ನಾಗಿ ಬಳಕೆ ಮಾಡಲು ಸಂಸ್ಥೆ ಉದ್ದೇಶಿಸಿದೆ. “ಅನುಮತಿ ಕೇಳಿ ಮನವಿ ಸಲ್ಲಿಸಲಾಗಿದೆ. ಅನುಮೋದನೆಗಾಗಿ ಕಾಯುತ್ತಿದ್ದೇವೆ, ಇಂಟ್ರಾನೇಸಲ್ ಲಸಿಕೆಯನ್ನು ಈಗಾಗಲೇ ಎರಡು ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿರುವವರಿಗೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.



Join Whatsapp