ಮಸೀದಿಯ ಧ್ವನಿವರ್ಧಕ ತೆರವುಗೊಳಿಸಿದ ಬೆಂಗಳೂರು ಪೊಲೀಸ್

Prasthutha|

ಬೆಂಗಳೂರು: ರಾಜ್ಯ ರಾಜಧಾನಿಯ ಮಸೀದಿಗಳಲ್ಲಿ ಇದ್ದ ಧ್ವನಿವರ್ಧಕಗಳನ್ನ ಪೊಲೀಸರು ಉಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತೆರೆವುಗೊಳಿಸಿದ್ದಾರೆ. ನಿನ್ನೆಯಷ್ಟೆ ಸಿದ್ಧಾಪುರ ವಾರ್ಡ್ 144 ನಲ್ಲಿದ್ದ ಧ್ವನಿ ವರ್ಧಕಗಳನ್ನು ತೆರವುಗೊಳಿಸಲಾಗಿದೆ.

- Advertisement -

ಈ ಸಂಬಂಧದ ರಿಟ್ ಪಿಟಿಷನ್ 4574/2021 ರಲ್ಲಿ ಈ ಬಗ್ಗೆ ವಿಚಾರಣೆ ಇನ್ನೂ ಬಾಕಿ ಇದೆ. ಆದರೆ ಅರ್ಜಿ ಇತ್ಯರ್ಥ ಆಗುವವರೆಗೂ ನ್ಯಾಯಾಲಯದ ಆದೇಶವನ್ನು ಪೊಲೀಸರು ಪರಿಗಣಿಸಬೇಕಾಗಿದೆ. ವಿಶೇಷ ದಿನಗಳ ಹೊರತು ಪಡಿಸಿ ಬೇರೆ ದಿನಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.

ಹೀಗಾಗಿ ಮಸೀದಿಗಳಲ್ಲಿದ್ದ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಪೊಲೀಸರು ನೊಟೀಸ್ ನೀಡಿದ್ದಾರೆ. ನಿರ್ಲಕ್ಷ್ಯ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.



Join Whatsapp